ಶಿಗ್ಗಾವ್

ತಾಲೂಕ ವಿದ್ಯುತ್ ಗುತ್ತಿಗೆದಾರರ ಸಭೆ

ತಾಲೂಕ ವಿದ್ಯುತ್ ಗುತ್ತಿಗೆದಾರರ ಸಭೆ

ಶಿಗ್ಗಾವಿ 15: ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ತಾಲೂಕ ಗುತ್ತಿಗೆದಾರರ ಕುಂದು ಕೊರತೆ ಹಾಗೂ ಸ್ಥಳೀಯ ಗುತ್ತಿಗೆದಾರರಿಗೆ ಸರ್ಕಾರದ ಆದೇಶಗಳು ಎಸ್ ಸಿ ಪಿ ಟಿ ಎಸ್ ಪಿ ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ ನಿಕಟಪೂರ್ವ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮಂಜುನಾಥ್ ಮಣ್ಣಣ್ಣವರ ನೇತೃತ್ವದಲ್ಲಿ ಚರ್ಚಿಸಲಾಯಿತು. 

ಈಗಾಗಲೇ ಸರ್ಕಾರದ ಆದೇಶದಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು 5 ಲಕ್ಷಗಳವರೆಗಿನ ಕಾಮಗಾರಿಗಳನ್ನು ಟಿಟಿಕೆ ಅಥವಾ ಪಿಟಿಕೆ ಮಾದರಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಆದೇಶ ಮಾಡಿದ್ದು ಆ ಪ್ರಕಾರ ಹಾವೇರಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಾಮಗಾರಿಗಳನ್ನು ಮಾಡಲು ಅವಾರ್ಡ್‌ ಮಾಡಲು ಅವಕಾಶವಿದ್ದು ಸ್ಥಳೀಯ ಗುತ್ತಿಗೆದಾರರು ತಮ್ಮ ಕಾರ್ಯಕ್ಷಮತೆ ಅನುಭವ ಗಮನಿಸಿಕೊಂಡು ಹೊಂದಾಣಿಕೆ ಮುಖಾಂತರ ಆಯಾ ತಾಲೂಕಿನ ಗುತ್ತಿಗೆದಾರರು ನಿಗದಿತ ಅವಧಿ ಒಳಗೆ ಕೆಲಸ ಮಾಡುವ ಜವಾಬ್ದಾರಿ ಹಾಕಿಕೊಂಡು ಕಾಮಗಾರಿಗಳನ್ನು  ಪಡೆದುಕೊಳ್ಳಬಹುದಾಗಿದೆ ಹೀಗಾಗಿ ಗುತ್ತಿಗೆದಾರರು ಕೆಲಸಗಳ ಜವಾಬ್ದಾರಿಯನ್ನ ಅತ್ಯಂತ ಜಾಗರೂಕತೆಯಿಂದ ವಹಿಸಿಕೊಂಡು ನಿರ್ವಹಿಸಬೇಕು ಪರಸ್ಪರ ಹೊಂದಾಣಿಕೆ ಮುಖಾಂತರ ದೊರೆತ ಕಾಮಗಾರಿ ಪೂರ್ಣಗೊಳಿಸುವ ಆದ್ಯತೆ ನಮ್ಮದಾಗಿರಬೇಕೆಂದು ಹಾಗೂ ತಿಳಿಯುವಾಗ ಗುತ್ತಿಗೆದಾರರು ಇಲಾಖೆಯ ಗೆಲುವು ನೌಕರರಿಗೆ ಕಾಗದಪತ್ರ ಕೊಡುತ್ತಿದ್ದು ಇದು ಸಮಂಜಸವಲ್ಲ ಜೊತೆಗೆ ಇಲಾಖೆಯವರೇ ಕೆಲಸ ನಿರ್ವಹಿಸುತ್ತಿದ್ದು ಈ ಬಗ್ಗೆ ಗುತ್ತಿಗೆದಾರರು ಎಚ್ಚೆತ್ತುಕೊಂಡು ಇರಬೇಕು ಎಂದು ಹಾಜರಿದ್ದ ಗುತ್ತಿಗೆದಾರರಿಗೆ ಸಲಹೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನಾಗಭೂಷಣ್ ಹಿರೇಮಠ, ಚಂದ್ರಶೇಖರ್ ಕೊಪೆರ್ಡೆ, ಕೇಟಿ ಪಾಟೀಲ್, ಎನ್ ಎಸ್ ಪಾಟೀಲ್, ಈರಣ್ಣ ಎಲಿಗಾರ, ಸೂರಜ್, ಶರಣಪ್ಪ ದೇಸಾಯಿ, ಇನ್ನು ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ