ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ತಾಲೂಕ ಬ್ಲಾಕ ಕಾಂಗ್ರೆಸ್ ಪದಾಧಿಕಾರಿಗಳ ಸಂತಾಪ
ಶಿಗ್ಗಾವಿ : ಸರಳತೆಗೆ ಹೆಸರಾಗಿದ್ದ ಬಡವರು ಹಾಗೂ ದಲಿತರ ಬಗ್ಗೆ ಕಾಳಜಿ ಹೊಂದಿದ ಕಾಂಗ್ರೇಸ್ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ದೇಶಕ್ಕೆ ಭರಿಸಲಾರದ ನಷ್ಟವಾಗಿದೆ ರಾಜೀವಗಾಂಧಿ ಹಾಗೂ ಸೋನಿಯಾಗಾಂಧಿಯವರ ಕುಟುಂಬ ಸದಸ್ಯರಂತೆ ಗುರುತಿಸಿಕೊಂಡಿದ್ದ ಅವರು ಯುಪಿಎ ಸರಕಾರದ ಅವಧಿಯಲ್ಲಿ ಕಾರ್ಮಿಕ ಸಚಿವರಾಗಿ, ಲೋಕಸಭೆ ಹಾಗೂ ರಾಜ್ಯ ಸಭಾ ಸದಸ್ಯರಾಗಿ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಂತಾಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸೈಯದ್ ಅಜ್ಜಂಪೀರ ಖಾದ್ರಿ, ತಾಲೂಕ ಬ್ಲಾಕ ಕಾಂಗ್ರೇಸ ಅಧ್ಯಕ್ಷ ಎಂ.ಎನ್ ವೇಂಕೋಜಿ ಮುಖಂಡ ಶ್ರೀಕಾಂತ ದುಂಡಿಗೌಡ್ರ, ಸೋಮಣ್ಣ ಬೇವಿನಮರದ, ಎಸ್.ಎಸ್.ಶಿವಳ್ಳಿ, ಪ್ರಕಾಶ ಹಾದಿಮನಿ, ಹನುಮರೆಡ್ಡಿ ನಡುವಿನಮನಿ, ಎಸ್.ಎಫ್.ಮಣಕಟ್ಟಿ, ಗುರುನಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಸುಧೀರ ಲಮಾಣಿ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಮುಸ್ತಾಕಹ್ಮದ ತಹಶೀಲ್ದಾರ, ಮುನ್ನಾ ಲಕ್ಷ್ಮೇಶ್ವರ, ಮುಕ್ತಿಯಾರ ತಿಮ್ಮಾಪೂರ, ರಶೀದ ಗೋಟಗೋಡಿ, ವಸಂತಾ ಬಾಗೂರ, ಹನುಮಂತ ಬಂಡಿವಡ್ಡರ, ಬಿ.ಸಿ.ಪಾಟೀಲ, ಅಣ್ಣಪ್ಪ ಲಮಾಣಿ, ಮಂಜುನಾಥ ಮಣ್ಣಣ್ಣವರ, ಮಂಜುನಾಥ ತಿಮ್ಮಾಪೂರ, ಶಬ್ಬೀರ ಅಹ್ಮದ ಮಕಾಂನದಾರ, ಅಶೋಕ ಗಾಣಿಗೇರ, ಸುಮಿತ ಸೂರ್ಯವಂಶಿ, ವಿಶ್ವನಾಥ ಗಾಣಿಗೇರ ಸೇರಿದಂತೆ ತಾಲೂಕಿನ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.