ತಲ್ಲೂರ ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಯರಗಟ್ಟಿ 07: ಬದುಕು ಭಗವಂತ ಕೊಟ್ಟ ಅಮುಲ್ಯ ಕೊಡುಗೆ. ಇದನ್ನು ಅರಿತು ಆಚರಿಸಿ ಬಾಳಿದರೆ ಜೀವನ ಸುಖಮಯ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು ಎಂದು ಬಸಪ್ಪ ಮಹಾರಾಜರು ಹೇಳಿದರು.
ಸಮೀಪದ ತಲ್ಲೂರ ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ಜಾತ್ರಾ ಮಹೋತ್ಸವದ ನಿಮಿತ್ಯ ಜರುಗಿದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಧಾಮರ್ಿಕ ಸಭೆಗಳು ಮನುಷ್ಯರ ಮನಸ್ಸು ಬೆಸೆಯುತ್ತವೆ ಸಂತರು ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಿದ್ದಂತೆ ಮನುಷ್ಯತ್ವ ಅರಿತು ನಡಿಯಬೇಕು. ಜಗದ ಇಚ್ಛೆಯಂತೆ ನಡೆಯದೆ ಜಗದೀಶನ ಇಚ್ಛೆಯಂತೆ ನಡೆಯುವವನೇ ನಿಜವಾದ ಶರಣ ಎಂದರು.
ರೈನಾಪೂರದ ಕೀರ್ತನಕಾರ ವೆಂಕಪ್ಪ ಮಹರಾಜರು ಮಾತನಾಡಿ, ಪ್ರತಿಯೊಬ್ಬರೂ ಭಕ್ತಿ, ಭಾವ, ಪ್ರೀತಿ ವಿಶ್ವಾಸ ತುಂಬುವಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಾನ, ಧರ್ಮ ಮಾಡುವ ಗುಣಗಳನ್ನು ಬೆಳಸಿಕೊಳ್ಳಬೇಕು ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಮುಂಜಾನೆಯಿಂದ ಪೂತರ್ಿಸ್ಥಾಪನೆ, ಭಜನೆ, ಕಿರ್ತನೆ, ಪ್ರವಚನ, ರಾಮಜಪ, ಹರಿಪಾಠ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗನ ದಿಂಡಿ, ಪಲ್ಲಕ್ಕಿಮಹೋತ್ಸವ ವಿವಿಧ ವಾದ್ಯ ಮೆಳಗಳು ಸುಮಂಗಲೆಯರ ಆರತಿಯೊಂದಿಗೆ ಅಧ್ಧೂರಿಯಿಂದ ಮೆರವಣಿಗೆ ದೇವಸ್ಥಾನಕ್ಕೆ ತಲುಪಿತು. ನಂತರ ಮಹಾಪ್ರಸಾದ ಜರುಗಿತು.
ಸಂದರ್ಭದಲ್ಲಿ ಅರ್ಚಕ ಪರಶುರಾಮ ಜಾಧವ, ಸತ್ಯಪ್ಪ ವಂಟಗುಡಿ, ಶಿವಾಜಿ ಬೋಯಿಟೆ, ಸಂಗಪ್ಪ ಕಾಜಗಾರ, ಫಕೀರಪ್ಪ ಕುಲಮಗೇರಿ, ಭೀಮಶಿ ಉಪ್ಪಾರ, ಚಂದ್ರಪ್ಪ ಭೋವಿ, ಫಕೀರಪ್ಪ ಭಜಂತ್ರಿ, ಮಾರುತಿ ಹಳ್ಳೂರ, ವಿಠ್ಠಲ ದೊಡಮನಿ, ಹನಂತಪ್ಪ ಉಪ್ಪಾರ, ವಿಠ್ಠಲ ಬನ್ನೂರ, ಬಸವರಾಜ ಕಲಬಸಪ್ಪನ್ನವರ, ದುಂಡಪ್ಪ ಮಾಳಗಿ, ಯಲ್ಲಪ್ಪ ಈರಗಾರ, ವಿಠ್ಠಲ ಕಲ್ಲನ್ನವರ, ಶಿವಪ್ಪ ನಾಯ್ಕರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಂತ ಮಹಾರಾಜರು ಇದ್ದರು.