ತಲ್ಲೂರ ಗ್ರಾಪಂ, ಪಿಕೆಪಿಎಸ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ
ಯರಗಟ್ಟಿ 10: ದಿ.ಆನಂದ ಮಾಮನಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ನಂತರ ಪ್ರತಿಯೊಬ್ಬ ರೈತರಿಗೂ ಸಾಲ ಮನ್ನಾ ಅವಕಾಶ ನೀಡಿ ಸವದತ್ತಿ ತಾಲೂಕಿನ ಚಿತ್ರಣವನ್ನೆ ಬದಲಾಯಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ 2ನೇ ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಿಸಾನ ಸಮ್ಮಾನ ಯೋಜನೆ ಮೂಲಕ ಪ್ರತಿ ರೈತರಿಗೆ 6000 ರೂ. ನೀಡುತ್ತಿದ್ದು, ಬಿ.ಎಸ್.ಯಡಿಯುರ್ಪ ನೇತೃತ್ವದ ರಾಜ್ಯ ಸರಕಾರ 4000 ರೂ. ನೀಡುತ್ತಿತ್ತು. ಒಟ್ಟಾರೆ ರೈತರಿಗೆ ವರ್ಷಕ್ಕೆ 10 ಸಾವಿರ ರೂ. ನೀಡಲಾಗುತ್ತಿತ್ತು. ಆದರೆ, ಪ್ರಸ್ತುತ ರಾಜ್ಯ ಕಾಂಗ್ರೆಸ ಸರಕಾರ 4 ಸಾವಿರ ರೂ. ನೀಡುವ ಯೋಜನೆ ರದ್ದು ಮಾಡಿದ್ದಾರೆ. ಬಿಟ್ಟಿ ಭಾಗ್ಯ ಹಾಗೂ ಗ್ಯಾರಂಟಿ ಯೋಜನೆಗಳ ಬದಲು ರೈತರಿಗೆ ನೇರವಾಗಿ ಹಣ ಸಂದಾಯವಾಗುವ ಯೋಜನೆಯನ್ನು ಕೂಡಲೆ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷಿ ಸಂಘಗಳ ವತಿಯಿಂದ ಎಲ್ಲ ಉದ್ಯೊಗ ಮಾಡಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ಪಿಕೆಪಿಎಸ್ ಗಳಿಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತಿದೆ ಎಂದರು.
ಸವದತ್ತಿ ತಾಲೂಕಿನ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ರಾಷ್ಟ್ರದ ಹಿತದೃಷ್ಟಿಯಿಂದ ನರೇಂದ್ರ ಮೋದಿಜಿ ಮತ್ತೊಮ್ಮೆ ಭಾರತ ಪ್ರಧಾನಮಂತ್ರಿ ಆಗಬೇಕು. ಅವರ ಆಡಳಿತದಿಂದ ಭಾರತ ಗೌರವ ಸ್ಥಾನದಲ್ಲಿ ಇದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ತಾಲೂಕ ಬಿಜೆಪಿ ಅಧ್ಯಕ್ಷ ಈರಣ್ಣ ಚಂದರಗಿ, ರೈತ ಮೋರ್ಚಾ ಅಧ್ಯಕ್ಷ ಜಗದೀಶ ಕೌಜಗೇರಿ, ಶಿಕ್ಷಕ ಎ.ವಿ.ಇಂಗಳೆ ಮಾತನಾಡಿದರು.
ಪಿಕೆಪಿಎಸ್ ಅಧ್ಯಕ್ಷ ವಿನಯಕುಮಾರ ದೇಸಾಯಿ, ಉಪಾಧ್ಯಕ್ಷ ವೀರ್ಪ ಬೆನಕಟ್ಟಿ, ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರ್ಪ ಉಪ್ಪಿನ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕರನಾಯ್ಕರ ಅವರನ್ನ ಸನ್ಮಾನಿಸಲಾಯಿತು.
ಸಾನಿದ್ಯ ಹಿರೇಮಠದ ಶಿವಲಿಂಗಯ್ಯ ಸ್ವಾಮೀಜಿ, ತೊರಗಲ್ಲಮಠದ ದೀಪಕ ಸ್ವಾಮೀಜಿ, ಪಿಕೆಪಿಎಸ್ ಅಧ್ಯಕ್ಷ ವಿನಯಕುಮಾರ ದೇಸಾಯಿ, ಜಿಪಂ ಮಾಜಿ ಸದಸ್ಯ ವಿದ್ಯಾರಾಣಿ ಸೊನ್ನದ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ನರಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮಹಾರುದ್ರ್ಪ ಉಪ್ಪಿನ, ವೀರ್ಪ ಬೆನಕಟ್ಟಿ, ಮಲ್ಲಿಕಾರ್ಜುನ ಕರನಾಯ್ಕರ, ಕೆ.ವಿ.ಪಾಟೀಲ, ಗೌಡಪ್ಪ ಸವದತ್ತಿ, ಶಂಕರಗೌಡ ಪಾಟೀಲ, ಬಸಪ್ಪ ಅಂಗಡಿ, ಚಂಬನ್ನ ಲಕ್ಕನ್ನವರ, ಚಂದ್ರ್ಪ ಶಿವಪೂಜಿ, ಸಹದೇವ ಉಪ್ಪಿನ, ಸಿದ್ದಪ್ಪ ಮುರಗೋಡ, ಕಿರಣ ಸರದಾರ ಸೇರಿದಂತೆ ಗ್ರಾಮಸ್ಥರು ಕಾರ್ಯಕರ್ತರು ಇದ್ದರು. ಬಸವರಾಜ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.