ತಾಳಿಕೋಟಿ

ತಾಳಿಕೋಟಿ ಖಾಸ್ಗತೇಶ್ವರ ಮಠ ಭಾವೈಕ್ಯತೆಯ ಪ್ರತೀಕ : ಸಂಜಯಸಿಂಗ ರಜಪೂತ

ತಾಳಿಕೋಟಿ ಖಾಸ್ಗತೇಶ್ವರ ಮಠ ಭಾವೈಕ್ಯತೆಯ ಪ್ರತೀಕ : ಸಂಜಯಸಿಂಗ ರಜಪೂತ

ತಾಳಿಕೋಟೆ: ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಜುಲೈ 4ರಿಂದ 12ರವರೆಗೆ ನಡೆಯಲಿದ್ದು, ಜುಲೈ 12ರಂದು ಭವ್ಯ ರಥೋತ್ಸವ ನಡೆಯಲಿದೆ. 

ಇಂದು ಧರ್ಮದ ಹೆಸರಿನಲ್ಲಿ ಜನರ ಮದ್ಯೆ ದ್ವೇಶವನ್ನು ಬಿತ್ತಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಬೆಕೆಂದು ಕೆಲವರು ಪ್ರಯತ್ನಿಸುತ್ತೀರುವುದರಿಂದಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇಂಥಹ ಸಂಧಿಗ್ಧವಾದ ಸ್ಥಿತಿಯಲ್ಲಿ ಜಾತಿ ಧರ್ಮಗಳನ್ನು ಮೀರಿ ನಿವೆಲ್ಲರು ಮನುಷ್ಯರು ಎಂಬ ನೆಲೆಯಲ್ಲಿ ಪ್ರೀತಿ ವಿಶ್ವಾಸ ಹಾಗೂ ಸಾಮರಸ್ಯದಿಂದ ಬಾಳಿ ಎಂಬ ಸಂದೇಶವನ್ನು ಇಡೀ ನಾಡಿಗೆ ನೀಡುತ್ತೀರುವ ತಾಳಿಕೋಟಿ ಶ್ರೀ ಖಾಸ್ಗತೇಶ್ವರ ಮಠದ ಕಾರ್ಯ ಅನುಕರಣೀಯವಾಗಿದೆ. 

ಸುಮಾರು 1500 ವರ್ಷಗಳ ಐತಿಹಾಸಿಕ ವಿರಕ್ತ ಪರಂಪರೆಯನ್ನು ಹೊಂದಿರುವ ಮಠವು ಸಮಾಜಕ್ಕೆ ಶಾಂತಿ ಹಾಗೂ ಸಾಮರಸ್ಯದ ಅನೂನ್ಯ ಕೊಡುಗೆ ನೀಡುತ್ತಾ ಬರುತ್ತಿದೆ. ಶ್ರೀಮಠದ ಮೂಲ ಶಿವಯೋಗಿಗಳಾದ ಖಾಸ್ಗತ ಹಾಗೂ ವಿರಕ್ತಮಹಾಸ್ವಾಮಿಗಳು ಮಠವನ್ನು ಜಾತಿವಂತರ ಮಠವಾಗಿ ಮಾಡದೆ ನೀತಿವಂತರ ಮಠವನ್ನಾಗಿ ಮಾಡಿ ಸಹಸ್ರಾರು ಭಕ್ತಾಧಿಗಳಿಗೆ ಆಧ್ಯಾತ್ಮಿಕತೆಯ ದಾಸೋಹ ನೀಡಿ ಹೋದರು. ಈ ಇಬ್ಬರು ಮಹಾನ್ ಯೋಗಿಗಳು ಹಾಕಿ ಕೊಟ್ಟುಹೋದ ದಿವ್ಯ ಮಾರ್ಗದಲ್ಲಿಯೇ ಮಠಕ್ಕೆ ಬಾಲಶಿವಯೋಗಿಗಳಾಗಿ ನೇಮಕವಾಗಿರುವ ಶ್ರೀ ಸಿದ್ಧಲಿಂಗದೇವರು ಮುಂಎವರೆಸಿಕೊಂಡು ಹೋಗುತ್ತಿದ್ದಾರೆ. 

ಇಗಿನ್ನೂ ಇವರಿಗೆ 18ರ ವಯಸ್ಸು ಈ ಸಣ್ಣವಯಸ್ಸಿನಲ್ಲಿಯೇ ಅಗಾಧವಾಗದ ಆಧ್ಮಾತ್ಮಿಕ ಜ್ಞಾನ ದೂರದೃಷ್ಠಿ, ಪ್ರಗತಿಪರ ಚಿಂತನೆ ಹಾಗೂ ಸಾಮಾಜಿಕ ಕಳಕಳಿಯ ಗುಣಗಳಿಂದಾಗಿ ಇಂದು ಇಡೀ ಜಿಲ್ಲೆಯಲ್ಲಿ ಮನೆಮಾತಾಗುತ್ತಿದ್ದಾರೆ. ಸಮಾಜದ ಎಲ್ಲ ವರ್ಗದವರನ್ನು ಪ್ರೀತಿಸುವುದರ ಜೋತೆಗೆ ಅವರೆಲ್ಲರನ್ನೂ ಸಮಾನವಾಗಿ ಕಾಣುವ ಇವರು ಭಾವೈಕ್ಯತೆಯ ಸ್ಥಾಪನೆಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇವರು ಹೊಂದಿರುವ ಸಾಮಾಜಿಕ ಕಳಕಳಿಯನ್ನು ಜನರ ಮೆಚ್ಚುಗೆ ಗಳಿಸುತ್ತಿದೆ. ಸದಾ ಸಮಾಜಕ್ಕಾಗಿ ಏನಾದರು ಮಾಡಬೇಕೆಂಬ ತುಡಿತದಿಂದ ಯುವ ಭಕ್ತರ ತಂಡಗಳನ್ನು ಕಟ್ಟದ್ದಾರೆ. ಕೊರೊನಾ ಸಂಕಷ್ಟದಲ್ಲಿ ಈ ತಂಡಮಾಡಿದ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಈಗ ನಡೆಯುತ್ತಿರುವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವವನ್ನು ಒಂದು ಐತಿಹಾಸಿಕವಾದ ಕಾರ್ಯಕ್ರಮವನ್ನಾಗಿಸಲು ಸಕ್ರೀಯರಾಗಿದ್ದಾರೆ ಇಂದು ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ನಾವು ಕಾಣಬಹುದಾಗಿದೆ ಜುಲೈ 12ರಂದು ಭವ್ಯ ರಥೋತ್ಸವ ನಡೆಯಲಿದೆ ಇದು ಭಾವೈಕ್ಯತೆಯ ರಥೋತ್ಸವ ನಾವೆಲ್ಲರೂ ಸೇರಿ ಎಳೆಯೋಣ ಬನ್ನಿ..... 

ಜುಲೈ 12ರಂದು ಶ್ರೀ ಖಾಸ್ಗತೇಶ್ವರ ಜಾತ್ರೆ 

ಪ್ರಯುಕ್ತ ಈ ವಿಶೇಷ ವರದಿ 


ಸುದ್ದಿ ಓದಿ