ತಾಳಿಕೋಟೆ ಪುರಸಭೆ ರೂ.10.05 ಲಕ್ಷ ಉಳಿತಾಯ ಬಜೆಟ್ ಮಂಡನೆ
ತಾಳಿಕೋಟೆ07: ಪಟ್ಟಣದ ಪುರಸಭೆಯು ಪ್ರಸಕ್ತ 2022-23ನೆಯ ಸಾಲಿನಲ್ಲಿ ರೂ.10.05 ಲಕ್ಷ ಉಳಿತಾಯ ಬಜೆಟ್ನ್ನು ಮಂಡನೆ ಮಾಡಿ ಅನುಮೋದನೆಯನ್ನು ಪಡೆಯಲಾಯಿತು.
ಪಟ್ಟಣದ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ ಇವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷ ಸಂಗಮೇಶ ಅವರು ಬಜೆಟ್ನ್ನು ಮಂಡಿಸಿದರು. ಒಟ್ಟುರೂ. 1239.22 ಲಕ್ಷ ಆದಾಯದ ನೀರೀಕ್ಷೆಯಿದ್ದು ರೂ.229.17 ಲಕ್ಷ ವೆಚ್ಚದ ಅಂದಾಜನ್ನು ಮಂಡಿಸಲಾಯಿತು. ಆದಾಯ ನೀರೀಕ್ಷೆಯಲ್ಲಿ ಮುಖ್ಯವಾಗಿ ಆಸ್ತಿ ತೆರಿಗೆಯಿಂದ ರೂ. 123ಲಕ್ಷ, ವಾಣಿಜ್ಯ ಮಳಿಗೆಗಳಿಂದ ರೂ. 117 ಲಕ್ಷ ನೀರು ಸರಬರಾಜು ಸೌಕರ್ಯದಿಂದ ರೂ. 73 ಲಕ್ಷ, ರಾಜಸ್ವಗಳು-ಸಾಮಾನ್ಯ ರೂ.49 ಲಕ್ಷ, ಸಾಮಾನ್ಯ ಮತ್ತು ಹಣಕಾಸು ಆಯೋಗದಿಂದ ರೂ.560 ಲಕ್ಷ, ಕೇಂದ್ರ ಸರ್ಕಾರದಿಂದ 15ನೆಯ ಹಣಕಾಸು ಯೋಜನೆ ಅನುದಾನ-ರೂ.160 ಲಕ್ಷ ನೀರೀಕ್ಷಿಸಲಾಗಿದೆ. ಹಾಗೆಯೇ ಖರ್ಚಿನ ವಿಭಾಗದಲ್ಲಿ ಸಾಮಾನ್ಯ ಆಡಳಿತ ರೂ.376.95 ಲಕ್ಷ, ಬೀದೀದೀಪ ನಿರ್ವಹಣೆ ರೂ.147 ಲಕ್ಷ, ನೈರ್ಮಲ್ಯ , ಘನತ್ಯಾಜ್ಯ ನಿರ್ವಹಣೆ ರೂ.126 ಲಕ್ಷ, ನೀರು ಸರಬರಾಜು ರೂ.35 ಲಕ್ಷ ಹಾಗೂ ಘನತ್ಯಾಜ್ಯ ರೂ.26 ಲಕ್ಷ ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಪರಶುರಾಮ ತಂಗಡಗಿ, ಸದಸ್ಯುರುಗಳಾದ ವಾಸುದೇವ ಹೆಬಸೂರ, ಮುತ್ತಪ್ಪ ಚಮಲಾಪುರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನಿಂಗಣ್ಣ ಕುಂಟೋಜಿ, ಅಣ್ಣಾಜಿ ಜಗತಾಪ, ಯಾಶೀನ ಮಮದಾಪುರ, ಅಕ್ಕಮಹಾದೇವಿ ಕಟ್ಟಿಮನಿ,ದುಂಡಪ್ಪ ಪಾಟೀಲ, ಮೋಹನ ಬಡಿಗೇರ, ಜಯಸಿಂಗ ಮೂಲಿಮನಿ, ನಾಂನಿರ್ದೇಶಿತ ಸದಸ್ಯರಾದ ರಾಘವೇಂದ್ರ ವಿಜಾಪುರ, ಶರಣಗೌಡ ಗೊಟಗುಣಕಿ, ಸಂಗಯ್ಯ ಹಿರೇಮಠ, ಮಾನಸಿಂಗ ಕೊಕಟನೂರ, ನಿರಂಜನಶಾ ಮಕಾನದಾರ, ಸಿಬ್ಬಂದಿಗಳಾದ ಮುಖ್ಯಾಧಿಕಾರಿ ಸುರೇಶ ಪಾಟೀಲ, , ಕಂದಾಯಾಧಿಕಾರಿ ಎನ್.ಎಸ್.ಪಾಟೀಲ, ಆರೋಗ್ಯ ನೀರೀಕ್ಷಕ ಶಿವಾನಂದ ಜುಮನಾಳ, ಲೇಖಪಾಲ ಸಿದ್ಲಿಂಗ ಪಾಟೀಲ, ಶಿಲಾಧರ ಗತ್ತರಗಿ, ಶ್ರೀಪಾದ ಜೋಶಿ, ಶಂಕ್ರಗೌಡ ಪಾಟೀಲ ಇತರರಿದ್ದರು.