ರಾಣೆಬೆನ್ನೂರ

‘ಪ್ರತಿಭಾ ಕಲೋತ್ಸವ ಪ್ರತಿಭೆ ಎಲ್ಲರಲ್ಲಿಯೂ ಇದೆ ಸಮರ್ಥವಾಗಿ ಬಳಸಿಕೊಳ್ಳಬೇಕು’

‘ಪ್ರತಿಭಾ ಕಲೋತ್ಸವ ಪ್ರತಿಭೆ ಎಲ್ಲರಲ್ಲಿಯೂ ಇದೆ ಸಮರ್ಥವಾಗಿ ಬಳಸಿಕೊಳ್ಳಬೇಕು’

ರಾಣೆಬೆನ್ನೂರು 08:  ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಪ್ರತಿಭೆಯನ್ನುವುದು ಎಲ್ಲರಲ್ಲೂ ಇದ್ದೇ ಇರುತ್ತದೆ ಅದನ್ನು ಸಮರ್ಥವಾಗಿ ಹೊರಸೂಸಲು ಪ್ರತಿಭಾ ಕಾರಂಜಿ  ಕಲೋತ್ಸವ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌. ಪಾಟೀಲ  ಹೇಳಿದರು.  

ಅವರು ಇಲ್ಲಿನ ಕೊಟ್ಟೂರೇಶ್ವರ ನಗರದ ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆಯಲ್ಲಿ ನಡೆದ ರಾಣೆಬೆನ್ನೂರು 3ನೇ ಕ್ಲಸ್ಟರ್ ಮಟ್ಟದ ಕಲೋತ್ಸವ ಸಾಂಸ್ಕೃತಿಕ ಪ್ರತಿಭಾ  ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಮಕ್ಕಳು ಸಾಂಸ್ಕೃತಿಕವಾಗಿ ಬೆಳೆದಾಗ, ಭವಿಷ್ಯದಲ್ಲಿ ಶಿಕ್ಷಣಕ್ಕೆ ಪೂರಕವಾಗಿ ತಮ್ಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುವುದು ಎಂದ ಅವರು, ಕಲೆ,ಸಾಹಿತ್ಯ ಸಂಗೀತ ಮತ್ತು ಸಂಸ್ಕೃತಿ ನಮ್ಮ ಜೊತೆ ಜೊತೆಯಲಿ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ವಾಣಿ ಯಶವಂತ ರಾಥೋಡ್‌.ಅವರು ವಹಿಸಿದ್ದರು.  

ಮಧು ಗ್ರಾಮೀಣ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ,ಅನಿಲ್ ಕುಮಾರ್ ಚವ್ಹಾಣ,ಕ್ಷೇತ್ರ ಸಂಪನ್ಮೂಲ ಅಧೀಕ್ಷಕ, ಮಂಜುನಾಥನಾಯಕ್, ಸಿ. ಆರ್‌. ಪಿ ತುಳಜಾಭವಾನಿ, ಸೇರಿದಂತೆ ಮತ್ತಿತರ ಗಣ್ಯರು, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ನಿರ್ಮಲಾ ಬುಳ್ಳಾಪುರ್ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಎಂ.ಎನ್‌.ಕನವಳ್ಳಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಜಿ. ಎಸ್‌. ಸಾರಂಗಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಎಂ.ಜಿ. ಲಮಾಣಿ, ನಿರೂಪಿಸಿ ಎಸ್‌. ಎಂ. ಪಾಟೀಲ್ ವಂದಿಸಿದರು. ಕಲೋತ್ಸವ ದ ನಿರ್ಣಾಯಕರಾಗಿ, ಶಿಕ್ಷಕರಾದ ಎಮ್‌. ವಿ.ಕಮ್ಮಾರ್, ಕೆ. ಕೆ ಅಂಗಡಿ, ಪ್ರಭು ಎರೆಸೀಮೆ, ಜಿ.ಆರ್‌.ಕಾಟೇನಹಳ್ಳಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಕಲೋತ್ಸವ ಪ್ರತಿಭಾ ಸ್ಪರ್ಧೆಯಲ್ಲಿ3ನೇ ಕ್ಲಸ್ಟರ್ ನ 11 ಪ್ರೌಢಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭಾಸಂಪನ್ನತೆ ಪ್ರದರ್ಶಿಸಿ ಸಾರ್ವಜನಿಕರ, ಗಮನಸೆಳೆದರು. 


ಸುದ್ದಿ ಓದಿ