ಜಮಖಂಡಿ

ಪೊಲೀಸ್ ಸಿಬ್ಬಂದಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಪೊಲೀಸ್ ಸಿಬ್ಬಂದಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಲೋಕದರ್ಶನ ವರದಿ

ಜಮಖಂಡಿ 05: ವಿದ್ಯಾರ್ಥಿಗಳು ಕುತೂಹಲದಿಂದ ಶಿಕ್ಷಕರನ್ನು ಪ್ರಶ್ನೀಸಿ ಅರ್ಥೈಸಿಕೊಂಡು ಕಲಿಯುತ್ತಾರೊ ಅಂತಹ ವಿದ್ಯಾರ್ಥಿಗಳು ಅತ್ಯತ್ತಮ ಸಾಧನೆ ಮಾಡುಲು ಸಾಧ್ಯ ಎಂದು ಜಮಖಂಡಿ ಡಿಎಸ್ಪಿ ಶಾಂತವೀರ,ಈ ಹೇಳಿದರು.

ತಾಲೂಕಿನ ಶೂರ್ಪಾಲಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆದ ಪೊಲೀಸ್ ಉಪವಿಭಾಗ ಜಮಖಂಡಿ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳ ಅಭಿನಂದನಾ ಕಾರ್ಯಕ್ರಮ ಹಾಗೂ ಪೊಲೀಸ್ ಸಿಬ್ಬಂದಿಗಳ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಬಿಡುವಿಲ್ಲದ ಸಮಯದಲ್ಲಿ ಕರ್ತವ್ಯವದ ಒತ್ತಡದಲ್ಲಿ ಮಕ್ಕಳ ಜೊತೆ ಸಮಯ ಸಿಗದಿದ್ದರೂ ಕೂಡ ಉತ್ತಮ ಫಲಿತಾಂಶ ಪಡೆದಿರುವದು ನಮಗೆ ಹೆಮ್ಮೆಯ ಸಂಗತಿ. ಕರ್ನಾಟಕ ವಿಧಾನಸಭೆಯ ಚುಣಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದಕ್ಕೆ ಎಲ್ಲ ಸಿಬ್ಬಂದಿಗಳಿಗೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸಿದರು.

 ಬನಹಟ್ಟಿಯ ಸಿಪಿಐ ಸುನೀಲಗೌಡ ಪಾಟೀಲ ಮಾತನಾಡಿ, ಮೇಲಾಧಿಕಾರಿಗಳ ಮಾರ್ಗದರ್ಶನದಿಂದ ಚುನಾವಣಾ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬಿ ಎಲ್ಲ ವಿಷಯಗಳನ್ನು ಮುಕ್ತವಾಗಿ ಚರ್ಚಿ ಸಿ ಅವರ ಸಹಕಾರದಿಂದ ಹಾಗೂ ಎಲ್ಲ ಸಿಬ್ಬಂದಿಗಳೂ ಹಗಲಿರುಳೂ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿದ್ದರಿಂದ ಚುಣಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದರು.

ಜಮಖಂಡಿಯ ಸಿಪಿಐ ಗುರುನಾಥ ಚವ್ಹಾಣ ಮಾತನಾಡಿ, ಚುಣಾವಣಾ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಇಲಾಖೆಗೆ ಉತ್ತಮ ಹೆಸರು ತಂದು ಕೊಟ್ಟ ಎಲ್ಲ ಸಿಬ್ಬಂದಿಗಳಿಗೂ ಹಾಗೂ ಇಲಾಖೆಯ ಜೊತೆಗೆ ಸಹಕರಿಸಿದ ಎಲ್ಲ ಜನತೆಗೆ ಕೂಡ ಧನ್ಯವಾದಗಳನ್ನು ತಿಳಿಸಿದರು. ಮುಧೋಳ ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿದರು. 

**** ಬನಹಟ್ಟಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸಿ ಕೇವಲ ಐದು ದಿನದಲ್ಲಿ ಚಾರ್ಚಸೀಟ್ ತಯಾರಿಸಿ ನ್ಯಾಯಾಲಕ್ಕೆ ಒಪ್ಪಿಸಲು ಶ್ರಮ ವಹಿಸಿದ ಬನಹಟ್ಟಿ ವೃತ್ತದ ತನಿಖಾ ಸಹಾಯಕರಿಗೆ ಹತ್ತು ಸಾವಿರ ರೂ.ಗಳನ್ನು ನಗದು ಬಹುಮಾನ ನೀಡಲಾಗಿದೆಂದು ಶ್ಲಾಘನೀಸಿದ ಡಿವಾಯ್ಎಸ್ಪಿ ಶಾಂತವೀರ. 

ಜಮಖಂಡಿ ಶಹರ  ಪಿಎಸ್ಐ  ಬಸವರಾಜ ಕೊಣ್ಣೂರೆ, ಗ್ರಾಮೀಣ ಮಧು ಎಲ್, ಸಾವಳಗಿ ಪಿಎಸ್ಐ ಆರ್ ಆರ್ ಕೊಂಗನಳ್ಳಿ, ಮಹಾಲಿಂಗಪೂರ ಪಿಎಸ್ಐ ಪ್ರವೀಣ ಬಗಲಿ, ಲಕ್ಷ್ಮೀ ಪತ್ತೆನ್ನವರ, ಮುಧೋಳ ಪಿಎಸ್ಐ ಸಂಗಮೇಶ ಹೊಸಮನಿ, ಬನಹಟ್ಟಿ ಪಿಎಸ್ಐ ಬಸವರಾಜ ಯದ್ದಲಗುಡ್ಡ   ತೇರದಾಳ ಪಿಎಸ್ಐ ಸೇರಿದಂತೆ ಸಿಬಂದಿಗಳು ಇದ್ದರು. 



ಸುದ್ದಿ ಓದಿ