ತಾಳಿಕೋಟಿ

ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಬಿರಾದಾರ

ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಬಿರಾದಾರ


ತಾಳಿಕೋಟೆ,: ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವ ಅಭಿವೃದ್ಧಿ ಹಾಗೂ ಗುಳೆ ತಪ್ಪಿಸಲು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ನರೇಗಾ ಯೋಜನೆ ರೂಪಿಸಲಾಗಿದೆ. ನರೇಗಾದಿಂದ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ನರೇಗಾ ಯೋಜನೆಯ ಯಶಸ್ವಿಗೆ ಕಾರ್ಮಿಕರ ಶ್ರಮವೇ ಮೂಲಾಧಾರವಾಗಿದೆ ಎಂದು ತಾಲೂಕು ಪಂಚಾಯತದ ಸಹಾಯಕಿ ನಿರ್ದೇಶಕಿ ಎಸ್‌.ಎಸ್‌.ಬಿರಾದಾರ ಹೇಳಿದರು. 

ಅವರು ತಾಲೂಕಿನ ಬಾವೂರ ಗ್ರಾಮ ಪಂಚಾಯತದಲ್ಲಿ ನಡೆದ ನರೇಗಾ ದಿವಸ್ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ವೈಯಕ್ತಿಕ ಕಾಮಗಾರಿಗಳಾದ ದನದ ಶೆಡ್, ಮೀನು ಸಾಕಾಣಿಕೆ, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಕುರಿ, ಮೇಕೆ ಶೆಡ್, ಬಚ್ಚಲು ಇಂಗು ಗುಂಡಿ ಸೌಕರ್ಯ ಪಡೆದುಕೊಳ್ಳಬೇಕು. ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿ ಪ್ರತಿದಿನ 289ರೂ. ಕೂಲಿ ಪಡೆದು ತಮ್ಮ ತಮ್ಮ ಗ್ರಾಮಗಳಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು. 

ಪಿಡಿಓ ಎಸ್‌.ವಾಯ್‌.ತಳವಾರ ಮಾತನಾಡಿ, ಬಡವರಿಗೆ ಸಹಕಾರಿ ಆಗಲೆಂದು ಸರಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಉದ್ಯೋಗ ಬಯಸುವವರು ಆಯಾ ಗ್ರಾಮ ಪಂಚಾಯತಿ ಕಚೇರಿಗೆ ಅಗತ್ಯ ದಾಖಲೆಗಳಾದ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಭಾವಚಿತ್ರವುಳ್ಳ ವಿವರಗಳನ್ನು ಸಲ್ಲಿಸಿದ್ದಲ್ಲಿ ಜಾಬ್ ಕಾರ್ಡ್‌ ಪಡೆದುಕೊಂಡು ಕೆಲಸ ನೀಡಲಾಗುವದು ಎಂದರು. 

ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸೈನಾಜಬೇಗಂ ಕಮತಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಯತ ಸದಸ್ಯರಾದ ಬಾಬು ಬಜಂತ್ರಿ, ಎಚ್‌.ಎಲ್‌.ಭಜಂತ್ರಿ, ನಂದಿನಿ ಪವಾರ, ಶಿವಬಾಇ ಮೇಟಿ, ಸಿಬ್ಬಂದಿಗಳಾದ ಟಿ.ಡಿ.ಹೊಸಮನಿ, ಪಿ.ಎ.ಗುಡಗುಂಟಿ, ಜಿ.ಎಸ್‌.ಬಿರಾದಾರ, ವಾಯ್‌.ಕೆ.ವಾಲಿಕಾರ, ಕಾರ್ಮಿಕರಾದ ಹುಲಗಪ್ಪ ಮಾದರ, ಮಾಯಪ್ಪ ಮಾದರ, ಭೀಮವ್ವ ಮಾದರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ