ಸೌಂದತ್ತಿ

ದೃಷ್ಠಿ ಕೇಂದ್ರದ ಲಾಭ ಪಡೆಯಿರಿ: ಆನಂದ ಮಾಮನಿ

ದೃಷ್ಠಿ ಕೇಂದ್ರದ ಲಾಭ ಪಡೆಯಿರಿ: ಆನಂದ ಮಾಮನಿ

ಸವದತ್ತಿ 23: ಪ್ರತಿ ಮಂಗಳವಾರ ನುರಿತ ವೈದ್ಯರಿಂದ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ದೃಷ್ಠಿ ಕೇಂದ್ರದಲ್ಲಿ ನೀಡಲಾಗುವುದು. ತಾಲೂಕಿನ ಜನತೆ ಇದರ ಸದುಪಯೋಗ ಪಡೆಯಿರೆಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು. 

ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಸಿ. ಎಮ್‌. ಮಾಮನಿ ಚಾರಿಟೇಬಲ್ ಟ್ರಸ್ಟ್‌, ಎಸ್‌. ಜಿ. ಎಮ್ ಆಯ್ ಬ್ಯಾಂಕ್, ಆರ್‌. ಎಫ್‌. ಟ್ರಸ್ಟ್‌ ಹಾಗೂ ಎಮ್‌. ಎಮ್‌. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ಮಂಗಳವಾರ ಜರುಗಿದ ದೃಷ್ಠಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಸಿ. ಎಮ್‌. ಮಾಮನಿ ಪುಣ್ಯಸ್ಮರಣೆ ನಿಮಿತ್ಯ ಈಚೇಗೆ ನಡೆದ  ನೇತ್ರ ಶಿಬಿರದಲ್ಲಿ 1008 ಫಲಾನುಭವಿಗಳ ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ. ಎಂ. ಎಂ ಜೋಶಿ ಅವರು ಅಂಧರ ಬಾಳಿಗೆ ಬೆಳಕಾಗಲು ತಮ್ಮ ಇಡೀ ಜೀವನ ಮುಡಿಪ್ಪಿಟ್ಟಿದ್ದಾರೆ. ಮುನವಳ್ಳಿಯ 3 ವರ್ಷದ ದೃಷ್ಠಿಹೀನ ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಜಗತ್ತು ನೋಡುವ ಹಾಗೇ ಮಾಡಿದ ಕೀರ್ತಿ ಜೋಶಿ ಆಸ್ಪತ್ರೆಗೆ ಸಲ್ಲುತ್ತದೆ.  

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನತೆಯ ಆರೋಗ್ಯಕ್ಕೆ ಹಲವಾರು ಯೋಜನೆ ಜಾರಿಗೊಳಿಸಿವೆ. ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗೂ ಯೋಜನೆ ಲಾಭ ಸಮರ​‍್ಕ ರೀತಿಯಲ್ಲಿ ತಲುಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ಶ್ಲಾಘನೀಯ. ಸಮಾಜಮುಖಿ ಕಾರ್ಯಗಳಿಗೆ ಶ್ರಮಿಸೋಣ ಎಂದರು.  

ಶ್ರೀನಿವಾಸ ಜೋಶಿ ಮಾತನಾಡಿ, ಅಂಧತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸ್ಥಾಪಿಸಲಾಗಿದೆ. ರಾಜ್ಯದ 13 ಕಡೆಗಳಲ್ಲಿ ದೃಷ್ಠಿ ಕೇಂದ್ರ ಸ್ಥಾಪಿಸಿ, ಅಲ್ಲಿನ ಅಂಧರಿಗೆ ದೃಷ್ಠಿ ಭಾಗ್ಯ ನೀಡುವ ಉದ್ದೇಶ ಸಂಸ್ಥೆಯದ್ದಾಗಿದೆ. ಸಾರ್ವಜನಿಕರಿಗೆ ದೃಷ್ಠಿ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು. 

ಈ ವೇಳೆ ಮೂಲಿಮಠದ ಶ್ರೀಗಳು, ಬಿದರಿ ಕಲ್ಮಠ ಶ್ರೀಗಳು, ದಂಡಪಾಣಿ ದೀಕ್ಷಿತರು ಸಾನಿಧ್ಯವಹಿಸಿದ್ದರು. ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಯಶವಂತಕುಮಾರ, ಪ್ರಶಾಂತ ಪಾಟೀಲ, ಎಚ್‌.ಎಮ್‌. ಮಲ್ಲನಗೌಡ್ರ, ಮಹೇಶ ಚಿತ್ತರಗಿ, ನಯನಾ ಭಸ್ಮೆ, ದೀಪಕ ಜಾನ್ವೇಕರ, ಡಾಽಽ ಎ.ಎಸ್‌. ಗುರುಪ್ರಸಾದ, ಕೆ.ವಿ ಸತ್ಯಮೂರ್ತಿ, ಆರ್‌. ಕೃಷ್ಣಪ್ರಸಾದ ಇದ್ದರು. 


ಸುದ್ದಿ ಓದಿ