ಇಂಡಿ

ಕೋಳಿ ಸಾಕಾಣಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿ: ಡಾ. ರಾಜಕುಮಾರ

ಕೋಳಿ ಸಾಕಾಣಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿ: ಡಾ. ರಾಜಕುಮಾರ

ಇಂಡಿ 30: ಕೋಳಿ ಸಾಕಾಣಿಕೆಯು ಕಡಿಮೆ ಬಂಡವಾಳದಿಂದ ತೊಡಗಿಸಿ ಅಲ್ಪ  ಸಮಯದಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಉದ್ಯಮ ಯಾವುದಾದರು ಇದ್ದರೆ ಅದು ಕೋಳಿ ಸಾಕಾಣಿಕೆಯಾಗಿದೆ ಎಂದು ಪಶು ವೈದ್ಯಾಧಿಕಾರಿ  ಡಾ. ರಾಜಕುಮಾರ ಅಡಕಿ ಹೇಳಿದರು.

ಪಟ್ಟಣದ ರೈಲು ನಿಲ್ದಾಣ ರಸ್ತೆಯ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ  ವೈಜ್ಞಾನಿಕ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕೋಳಿ ಸಾಕಾಣೆಕೆ ಕುರಿತು ಸರಿಯಾದ ಮಾಹಿತಿ ಇರದೇ ಇದ್ದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ವಿಜಯಪುರ ಜಿಲ್ಲೆ ಸುತ್ತಮುತ್ತ ಕೋಳಿ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಕೋಳಿ ಸಾಕಾಣಿಕೆಯನ್ನು ಮಾಡಲು ಮುಂದೆ ಬರುತ್ತಿದ್ದಾರೆ. ಆದ್ದರಿಂದ ರೈತರಿಗೆ ಸರಿಯಾದ ಮಾಹಿತಿ ಸಿಗದೆ ಇರುವುದರಿಂದಾಗಿ ಬಹಳಷ್ಟು ಜನರು  ಕೋಳಿ ಸಾಕಾಣಿಕೆ ಮಾಡಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ಇಂದು ಇಂತಹ ತರಬೇತಿ ಪಡೆದುಕೊಂಡು ಸಾವಲಂಭಿ ಬದುಕು ಸಾಗಿಸಲು ಅನುಕೂಲವಾಗುತ್ತದೆ ಎಂದರು. 

ಈ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಡಾ.ಆರ್.ಬಿ. ನೆಗಳೂರ ಮಾತನಾಡಿದರು. 

ಪಶು ವಿಜ್ಞಾನಿ  ಡಾ. ಸಂತೋಷ ಶಿಂದೆ  ತರಬೇತಿಯ ಮುಖ್ಯ ಉದ್ದೇಶಗಳು, ಪ್ರಮುಖ ಕೋಳಿ ತಳಿಗಳು, ಕೋಳಿ ಆಹಾರ ತಯಾರಿಕೆ, ಅಝೋಲ್ಲಾ ಮತ್ತು ಇನ್ನಿತರ ವಿಷಯದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 

ನಂತರ ಪ್ರಾಯೋಗಿಕವಾಗಿ ಕೆ.ವಿ.ಕೆ. ಫಾರ್ಮನಲ್ಲಿ ಕೋಳಿ ಸಾಕಾಣಿಕೆ ಘಟಕಕ್ಕೆ ಭೇಟಿ ಮಾಹಿತಿ ನೀಡಿದರು.

ವೇದಿಕೆ ಮೇಲೆ ಪ್ರಗತಿ ಪರ ರೈತರಾದ ಅರವಿಂದ ಕೊಪ್ಪ, ಡಾ. ರವಿ ವೈ. ವಿಜ್ಞಾನಿ (ಗೃಹ ವಿಜ್ಞಾನ), ಡಾ. ಹೀನಾ ಎಂ. ಎಸ್. ವಿಜ್ಞಾನಿ (ತೋಟಗಾರಿಕೆ) ಮತ್ತು ಡಾ. ಸೈಯದಾ ಸಮೀನಾ ಅಂಜುಂ ವಿಜ್ಞಾನಿ (ಸಸ್ಯ ರೊಗ ಶಾಸ್ತ್ರ) ಇವರು ಉಪಸ್ಥಿತರಿದ್ದರು. ಡಾ. ಸವಿತಾ ಬಿ ವಿಜ್ಞಾನಿ ವಂದಿಸಿದರು.

ಸುದ್ದಿ ಓದಿ