ಪಂಚಾಯತ್ನಲ್ಲಿ ಭ್ರಷ್ಟಾಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ : ಮದ್ದಿನ್
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕ ಯಶವಂತಗೌಡ ಪಾಟೀಲರು ಮಾತನಾಡಿದರು.
ಇಂಡಿ 05: ಗ್ರಾಮ ಪಂಚಾಯತ್ಗಳಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಕೂಡಲೆ ಅಧಿಕಾರಿಗಳು ಎಚ್ಚೆತ್ತು ಪಂಚಾಯತ್ನಲ್ಲಿ ಭ್ರಷ್ಟಾಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ತಾಲೂಕಾ ಪಂಚಾಯತ್ ಇಓ ಸುನೀಲ್ ಮದ್ದಿನ್ ಅವರಿಗೆ ತಾಕೀತು ಮಾಡಿದರು.
ಅವರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಸಬಾಭವನದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳ ಅಭಿವೃಧ್ಧಿಗಾಗಿ ಗ್ರಾಮ ಪಂಚಾಯತ್ ರಚಿಸಿ ಅಲ್ಲಿ ಆಡಳಿತ ನಡೆಸಲಾಗುತ್ತದೆ ಆದರೆ ಅಭಿವೃಧ್ಧಿ ಮಾಡಬೇಕಾದ ಅಧಿಕಾರಿಗಳೆ ಬ್ರಷ್ಟಾಚಾರ ಮಾಡಿದರೆ ಹೇಗೆ? ಯಾವುದೇ ಕಾರಣಕ್ಕೂ ಬ್ರಷ್ಟಾಚಾರ ಮಾಡಿದ ಅಧಿಕಾರಿ ರಜೆ ಹಾಕಿ ಹೋಗಬಾರದು ಅಲ್ಲೇ ಇದ್ದು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ನೀರಿಲ್ಲದೆ ಬಿತ್ತಿದ ಬೀಜಗಳು ಮೊಳಕೆಯೊಡೆಯುತ್ತಿಲ್ಲ. ಸಚಿವ ಉಮೇಶ ಕತ್ತಿಯವರು ಇಲ್ಲಿನ ರೈತರ ಸ್ಥಿತಿ ಅರಿತು ತಕ್ಷಣವೇ ಕಾಲುವೆಗೆ ನೀರು ಹರಿಸಬೇಕು ಎಂದು ಫೋನಿನಲ್ಲಿ ಮಾತನಾಡಿದ್ದೇನೆ. ತಕ್ಷಣವೇ ಕಾಲುವೆಗೆ ನೀರು ಹರಿಸಬೇಕು. ನಂತರ ಐ.ಸಿ.ಸಿ ಸಭೆ ಕರೆದು ಅನುಮೋದನೆ ಪಡೆಯಬೇಕು ಎಂದು ಸಚಿವರಿಗೆ ಮತ್ತು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ವಿನಂತಿಸಿರುವದಾಗಿ ತಿಳಿಸಿದರು.
ಮಾನವ ನಿರ್ಮಿತ ನೆರೆ ಹಾವಳಿ- ಭೀಮಾ ನದಿಗೆ ಕಳೆದ ಬಾರಿ ಮಾನವ ನಿರ್ಮಿತ ನೆರೆ ಹಾವಳಿ ಇಂಡಿ, ಚಡಚಣ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ, ಆಸ್ತಿ,ಪಾಸ್ತಿ, ಜನ ಜಾನುವಾರು ಹಾನಿಯಾಗಿದ್ದು ಈ ಕುರಿತು ಎರಡು ರಾಜ್ಯಗಳ ಅಧಿಕಾರಿಗಳು ಮೇಲಿಂದ ಮೇಲೆ ಚರ್ಚೆ ನಡೆದು ಸಮನ್ವಯ ಸಾಧಿಸಬೇಕು. ಈ ಕುರಿತು ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತರಾವ ಪಾಟೀಲರ ಜೊತೆಗೆ ಮಾತನಾಡಿ ಇಲ್ಲಿಯ ಪರಿಸ್ಥಿಯ ಬಗ್ಗೆ ಮನವರಿಗೆ ಮಾಡಿ ಕೊಟ್ಟಿದ್ದೇನೆ ಎಂದರು.
ಪಟ್ಟಣದಲ್ಲಿನ ಮಿನಿವಿಧಾನಸೌಧಕ್ಕೆ ಲಿಪ್ಟ ನಿರ್ಮಿಸಲು ಸರಕಾರ ಅನುಮೋದನೆ ನೀಡಿದೆ. ಸಕ್ಕರೆ ಕಾರ್ಖಾನೆ ಬಿಲ್ಲು ರೈತರ ಬ್ಯಾಂಕ ಅಕೌಂಟಗೆ ಜಮಾ ಮಾಡಿಸಿದೆ. ಕೃಷ್ಣಾ ಕಾಲುವೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಕಾರ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಬೇಕು. ಈ ಕುರಿತು ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು. ಉಡಚಣ ರೋಡಗಿ ಬ್ರಿಡ್ಜ ಕಾರ್ಯ ಮುಗಿಯುವ ಹಂತದಲ್ಲಿದ್ದು ಸಧ್ಯದಲ್ಲಿಯೇ ಲೋಕಾರೆ್ಣಗೆ ಸಿದ್ಧವಾಗಿದೆ ಎಂದರು.
ಡ್ರಗ್ಸ ಮಾಫಿಯಾ- ತಾಲೂಕು ಗಡಿ ಪ್ರದೇಶದಲ್ಲಿ ಇರುವದರಿಂದ ಮಧ್ಯಪ್ರದೇಶದಿಂದ ಡ್ರಗ್ಸ ಇಂಡಿ ತಾಲೂಕಿಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಧಾಬಾಗಳಲ್ಲಿ ಡ್ರಗ್ಸ ದಂಧೆ ಜೋರಾಗಿದ್ದು ಪೋಲಿಸ ಇಲಾಖೆ ಅಂತಹ ಜಾಲವನ್ನು ಕಂಡು ಹಿಡಿಯಬೇಕು.ಇಲ್ಲದಿದ್ದರೆ ಭವಿಷ್ಯದಲ್ಲಿ ಯುವ ಸಮೂಹ ಹಾಳಾಗುತ್ತದೆ. ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಇನ್ನೂ ಅನೇಕ ಧಂಧೆಗಳು ನಡೆಯುತ್ತಿವೆ ಅವುಗಳಿಗೆಲ್ಲ ಇಲಾಖೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸಂಭಂಧಿಸಿದವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಸಿದರು.
ಮೇಗಾ ಮಾರ್ಕೆಟ- ಪಟ್ಟಣದಲ್ಲಿ ಬರುವ ಸೋಮವಾರ ಮೇಗಾ ಮಾರ್ಕೆಟ ಕಾರ್ಯಕ್ಕೆ ಶಂಕು ಸ್ಥಾಪನೆ ಕಾರ್ಯ ನೇರವೇರಲಿದೆ. ಇಂಡಿ ಪಟ್ಟಣದ ಅಂಬೇಡಕರ ನಗರದಲ್ಲಿರುವ ರುದ್ರಭೂಮಿಯಲ್ಲಿ ಲೈಟು, ನೀರು ಮತ್ತು ಆಸನದ ವ್ಯವಸ್ಥೆ ಪುರಸಭೆಯವರು ಮಾಡಬೇಕು,
ತಾಲೂಕಿನಲ್ಲಿ ನೀರು ಬಳಕೆದಾರರ ಸಮಿತಿ ಅಸ್ಥಿತ್ವಕ್ಕೆ ಬರಬೇಕು. ಬಂದರೆ ಬೇರೆಯವರಿಗೆ ಮಾದರಿಯಾಗಲಿದೆ. ಪಟ್ಟಣದಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಬೂದಿಹಾಳ ಹತ್ತಿರ ಭೂಮಿ ತೆಗೆದುಕೊಳ್ಳಬೇಕು. ಹೊಲಗಳಿಗೆ ಹೋಗುವ ರೈತರಿಗೆ ದಾರಿ ಮಾಡಿ ಕೊಡಬೇಕು. ಈ ಕುರಿತು ಎಸಿ, ತಹಸೀಲ್ದಾರರು, ತಾಲೂಕಾ ಪಂಚಾಯತ್ ಇಓ ಮಧ್ಯಸ್ಥಿಕೆ ವಹಿಸಬೇಕೆಂದರು.
ಸಭೆಯಲ್ಲಿ ಆರೋಗ್ಯ ಕೃಷಿ, ಹೆಸ್ಕಾ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ಇಂಡಿ ಪಟ್ಟಣದಲ್ಲಿ ವಿಜಯಪೂರ ಮಾದರಿಯಲ್ಲಿ ಅಂಬೇಡ್ಕರ್ ಮೂರ್ತಿ ನಿರ್ಮಾಣ ಕುರಿತು, ಇಂಡಿಯ ವೈದ್ಯ ಸಂಘಕ್ಕೆ ಮತ್ತು ನಿವೃತ್ತ ಸೈನಿಕರ ಸಂಘಕ್ಕೆ ಸ್ಥಳ ನೀಡುವ ಕುರಿತು ಪುರಸಭೆ ಸಭೆಯಲ್ಲಿ ಚರ್ಚಿಸಿ ಠರಾವು ನೀಡುವ ಕುರಿತು ತಿಳಿಸಿದರು.
ಎಸಿ ರಾಹುಲ್ ಶಿಂಧೆ, ಡಿ.ವಾಯ್.ಎಸ್.ಪಿ ಶ್ರೀಧರ ದೊಡ್ಡಿ, ಇಓ ಸುನೀಲ ಮದ್ದೀನ, ತಹಸೀಲ್ದಾರ ಚಿದಂಬರ ಕುಲಕರ್ಣಿ ವೇದಿಕೆಯ ಮೇಲಿದ್ದರು.
ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ, ವೈದ್ಯಾಧಿಕಾರಿ ರಾಜೇಶ ಕೋಳೆಕರ, ಎಇಇ ಚಿಕ್ಕ ನೀರಾವರಿ ಬಸವರಾಜ ಬಿರಾದಾರ, ಜಿ.ಪಂ ಆರ್.ಎಸ್.ರುದ್ರವಾಡಿ, ಬಿಇಓ ವಸಂತ ರಾಠೋಡ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಅರಣ್ಯಾಧಿಕಾರಿ ಸುಮಾ ಹಳೆಹೊಳೆ, ರಾಜಕುಮಾರ ತೊರವಿ, ತೋಟಗಾರಿಕೆಯ ಆರ್.ಟಿ.ಹಿರೇಮಠ, ನಾಮ ನಿರ್ದೇಶಿತ ಸದಸ್ಯರಾದ ಅದೃಶಪ್ಪ ವಾಲಿ, ಬೌರಮ್ಮ ಮುಳಜಿ, ಪರಶುರಾಮ ಭೋಸಲೆ, ಅಣ್ಣಪ್ಪ ಮದರಿ ಮತ್ತಿರಿದ್ದರು.