ರಾಣೆಬೆನ್ನೂರ

ಅನ್ನಭಾಗ್ಯ ಅಕ್ಕಿ ದಾಸ್ತಾನು ತಹಸಿಲ್ದಾರ್ ಭೇಟಿ: 45 ಕ್ವಿಂಟಲ್ ಅಕ್ಕಿ ವಶಕ್ಕೆ

ಅನ್ನಭಾಗ್ಯ ಅಕ್ಕಿ  ದಾಸ್ತಾನು ತಹಸಿಲ್ದಾರ್ ಭೇಟಿ: 45 ಕ್ವಿಂಟಲ್ ಅಕ್ಕಿ ವಶಕ್ಕೆ

ರಾಣೆಬೆನ್ನೂರು  28:  ಇಲ್ಲಿನ ನೆಹರು ಮಾರ್ಕೆಟ್ ನ 4 ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದ, ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಅನ್ನಭಾಗ್ಯ ಅಕ್ಕಿಯನ್ನು ತಹಶೀಲ್ದಾರ್  ಅವರು  ಜಪ್ತ ಮಾಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದರ ಮಾಲೀಕರು ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿರುವ ತಹಸಿಲ್ದಾರ್ ಶಂಕರ್ ಜಿ. ಎಸ್‌. ಅವರು, ಖಚಿತ ಬಾತ್ಮಿ ಮೇರೆಗೆ, ಮತ್ತು ವಂದೇ ಮಾತರಂ ಯುವಕ ಸ್ವಯಂಸೇವಾ ಸಂಘದ ಕಾರ್ಯಕರ್ತರು ನೀಡಿರುವ ಹೇಳಿಕೆ ಮೆರೆಗೆ ಧಾವಿಸಿ,ಬೀಗ ಒಡೆದು ಪರೀಶೀಲಿಸಲಾಗಿದ್ದು, 4 ಗೋದಾಮುಗಳಲ್ಲಿ 45 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದ್ದು, ಕಂಡುಬಂದಿದೆ.ಅದನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಎಂದು ಹೇಳಿದ್ದಾರೆ. 


ಸುದ್ದಿ ಓದಿ