ಗಣೇಶೋತ್ಸವ ನಿಮಿತ್ಯ ಎಬಿಡಿಯಿಂದ ಟೀಶರ್ಟ್ ವಿತರಣೆ
ತಾಳಿಕೋಟಿ 01: ಗಣೇಶೋತ್ಸವ ನಿಮಿತ್ಯ ಕಾಂಗ್ರೇಸ್ ಮುಖಂಡ ಆನಂದಗೌಡ ದೊಡಮನಿ ನೇತೃತ್ವದ ಎಬಿಡಿ ಫೌಂಡೇಶನ್ ವತಿಯಿಂದ ದೇ.ಹಿಪ್ಪರಗಿ ಮತಕ್ಷೇತ್ರದಲ್ಲಿ ಗಣೇಶ ಉತ್ಸವ ಸಮಿತಿಗಳಿಗೆ ಟೀಶರ್ಟ್ಗಳನ್ನು ವಿತರಿಸಲಾಯಿತು.
ತಾಲೂಕಿನ ತುಂಬಗಿ ಗ್ರಾಮದಲ್ಲಿ ಟೀಶರ್ಟ್ಗಳನ್ನು ವಿತರಿಸಿ ಮಾತನಾಡಿದ ಎಬಿಡಿ ಫೌಂಡೇಶನ್ ಅಧ್ಯಕ್ಷ, ಮುಖಂಡ ಆನಂದಗೌಡ ದೊಡಮನಿ ಅವರು ಕಳೆದ 2 ವರ್ಷಗಳಿಂದ ಕೊರೋನಾದಂಥ ಮಹಾವಿಘ್ನದಿಂದಾಗಿ ಗಣಪನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅವಕಾಶ ಸಿಗಲೇ ಇಲ್ಲ. ಇದೀಗ ಸಾರ್ವಜನಿಕವಾಗಿ ವಿಘ್ನನಿವಾರಕನ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲು ಅವಕಾಶ ಸಿಕ್ಕಿದೆ.
ಈ ಕಾರಣದಿಂದಾಗಿ ನಾನು ಇಡೀ ಕ್ಷೇತ್ರದ ಸಮಿತಿಗಳ ಯುವಕರಿಗೆ ಉಚಿತವಾಗಿ ಟೀಶರ್ಟ್ ವಿತರಿಸುತ್ತದ್ದೇನೆ. ವಿಘ್ನ ನಿವಾರಕ ಗಣಪ ದುರಾಡಳಿತದಲ್ಲಿ ಮುಳುಗಿರುವ ಬಿಜೆಪಿಯನ್ನು ತೊಲಗಿಸಿ ರಾಜ್ಯದ ಜನರಿಗೆ ನೆಮ್ಮದಿಯ ಬದುಕು ನೀಡುವಂತಾಗಲೆಂದು ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಬಿಡಿ ಫೌಂಢೇಶನ್ದ ಪಧಾಧಿಕಾರಿಗಳು ಉತ್ಸವ ಸಮಿತಿಯ ಸದಸ್ಯರು ಗ್ರಾಮದ ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು.