ಯರಗಟ್ಟಿ

ರಾಷ್ಟ್ರ ಧ್ವಜವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ: ತಹಶೀಲ್ದಾರ

ರಾಷ್ಟ್ರ ಧ್ವಜವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ: ತಹಶೀಲ್ದಾರ

ಯರಗಟ್ಟಿ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು/ ಶಾಲಾ/ ಕಾಲೇಜು/ ವಿವಿಧ ಇಲಾಖೆಗಳು/ಕಛೇರಿಗಳು ತಿಳಿಸುದೆನೆಂದರೆ  clause (x) of paragraph 2.2 of Part-ll of the Flag code of India  ಅನುಸಾರ ಪ್ರಮುಖ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕಾಗದದಿಂದ ಮಾಡಿದ ರಾಷ್ಟ್ರೀಯ ಧ್ವಜವನ್ನು ಸಾರ್ವಜನಿಕರು ಬಳಸುವ ಬಗ್ಗೆ ಕಾರ್ಯಕ್ರಮದ ನಂತರ ಧ್ವಜವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ ಬಗ್ಗೆ ಖಚಿತಪಡಿಸಿಕೊಳ್ಳಲು ಹಾಗೂ ಅಂತಹ ಧ್ವಜಗಳನ್ನು ಖಾಸಗಿಯಾಗಿ, ಧ್ವಜದ ಘನತೆಗೆ ಅನುಗುಣವಾಗಿ ವಿಲೇವಾರಿ ಮಾಡಬೇಕು.  

ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಶಾಲಾ -ಕಾಲೇಜುಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಕೈಗೊಳ್ಳಲು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 


ಸುದ್ದಿ ಓದಿ