ಮೊಟ್ಟೆ ಎಸೆದ ದ್ರೋಹಿಗಳನ್ನು ಬಂಧಿಸಲು ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಅಗ್ರಹ
ಲೋಕದರ್ಶನ ವರದಿ
ಶಿಗ್ಗಾವಿ 20: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಲಿಲ್ಲ ಆದರೆ ಬಿಜೆಪಿ ಸರಕಾರ ಅಹಿತಕರ ಘಟನೆಗಳಿಗೆ ಅವಕಾಶ ನೀಡುತ್ತಿದ್ದು ಗುಪ್ತಚರ ಇಲಾಖೆಗೆ ಈಗಾಗಲೇ ಮಾಹಿತಿ ಇದ್ದು ಕೂಡಲೇ ಮೊಟ್ಟೆ ಎಸೆದ ದುಷ್ಟ ದ್ರೋಹಿಗಳನ್ನು ಬಂಧಿಸಬೇಕೆಂದು ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಅಗ್ರಹಿಸಿದರು.
ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಬಡವರ ಕೂಲಿ ಕಾರ್ಮಿಕರಿಗೆ ಅನ್ನದಾಮಯ್ಯೆ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರ ಮೇಲೆ ನಡೆದಿರುವ ಘಟನೆ ಅಸಹನೀಯವಾದದ್ದು. ಕಷ್ಟದಲ್ಲಿರುವವರ ಸಮಸ್ಯೆ ಕೇಳಲು ಹೋದವರ ಮೇಲೆ ಮಾಡಿರುವ ಕೃತ್ಯಕ್ಕೆ ಹೇಡಿಗಳು ಮಾಡುವ ಕೆಲಸವಾಗಿದೆ, ಸಿದ್ದರಾಮಯ್ಯನವರ ಶಕ್ತಿಯು ಸಿದ್ದರಾಮೋತ್ಸವದಿಂದ ಸಾಬೀತಾಗಿದೆ ಅದನ್ನು ನೋಡಿ ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಎಂದು ಹರಿಹಾಯ್ದರು.
ಸಿಎಂ ತವರು ಕ್ಷೇತ್ರದಲ್ಲಿ ಹಲವಾರು ದುರ್ಘಟನೆ ನಡೆದಿವೆ, ಇಲ್ಲಿಯವರಿಗೂ ಯಾವುದೇ ಪರಿಹಾರ ಘೋಷಣೆ ಆಗಿಲ್ಲಾ. ಮಳೆಯಿಂದಾದ ಹಾನಿಗೂ ಪರಿಹಾರ ನೀಡುವ ಕಾರ್ಯ ಚುರುಕಾಗಿ ನಡೆಯುತ್ತಿಲ್ಲಾ ಆದ್ದರಿಂದ ಸಿಎಂ ಅವರು ತಮ್ಮ ಪರಿಹಾರ ನಿಧಿಯಲ್ಲಿರುವ ಹಣವನ್ನು ಬಡವರಿಗೆ, ನೊಂದವರಿಗೆ ಹಂಚಿ ಎಂದರು.
ಹಿರಿಯ ನ್ಯಾಯವಾದಿ ಎಸ್ ವಿ ಪಾಟೀಲ ಮಾತನಾಡಿ ಈ ನಾಡಿನ ಮಾಜಿ ಮುಖ್ಯಮಂತ್ರಿಗಳ ಮೇಲೆ ಮೊಟ್ಟೆ ಎಸೆದವರು, ತಾವು ದೊಡ್ಡ ದೇಶ ಭಕ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ, ಮೊಟ್ಟೆ ಎಸೆಯುವ ಮೂಲಕ ಕಾಂಗ್ರೆಸ್ಸಿನ ಬಾಯಿ ಮುಚ್ಚಿಸಲಾಗದು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.
ಪ್ರತಿಭಟನೆಯಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಡಾ. ಫಕ್ಕಿರಗೌಡ ಪಾಟೀಲ, ಪ್ರೇಮಾ ಪಾಟೀಲ, ಬಸವರಾಜ ಸಾಲಿ, ರಮೇಶ ದುಗ್ಗತ್ತಿ, ಹನುಮಂತಪ್ಪ ಬಂಡಿವಡ್ಡರ, ಗುಡ್ಡಪ್ಪ ಜಲದಿ, ಎ ಸಿ ಜಮಾದಾರ, ಚಂದುಬಾಯಿ, ಬಿ ಸಿ ಪಾಟೀಲ, ಯಲ್ಲಪ್ಪ ತಳವಾರ, ಶಿವರಾಜ ಅಮರಾಪುರ, ಅಣ್ಣಪ್ಪ ಲಮಾಣಿ, ರವಿ ಕರಿಗಾರ, ಅಶೋಕ ಮನ್ನಂಗಿ, ಸಲೀಮ್ ಫರೋಕಿ, ಅಮ್ಜಾದ್ ಪಠಾಣ್, ಸುರೇಶ ಕೆಂಚಮ್ಮನವರ, ರಶೀದ್ ಗೊಟಗೋಡಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.