ಕಾರವಾರ

ಬೊಮ್ಮಾಯಿ ಪ್ರಮಾಣ ಸಿಹಿ ಹಂಚಿ ಸಂಭ್ರಮ

ಬೊಮ್ಮಾಯಿ ಪ್ರಮಾಣ ಸಿಹಿ ಹಂಚಿ ಸಂಭ್ರಮ

ಮುಂಡಗೋಡ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. 

ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಯಡಿಯೂರ​‍್ಪ ಆಪ್ತ   ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಿದ ಬಿಜೆಪಿಗೆ  ಜಯವಾಗಲಿ ಎಂದು  ಜಯಘೋಷ ಮೊಳಗಿಸಿದರು. 

ತಾಲೂಕಾ ಬಿಜೆಪಿ ಅಧ್ಯಕ್ಷ ನಾಗಭೂಷಣ ಹಾವಣಗಿ, ಜಿ.ಪಂ ಸದಸ್ಯ ಎಲ್‌.ಟಿ. ಪಾಟೀಲ, ರವಿಗೌಡ ಪಾಟೀಲ, ದುರೀಣ ಬಸವರಾಜ ಓಶಿಮಠ, ಯುವ ಮೋರ್ಚಾಧ್ಯಕ್ಷ ಗಣೇಶ ಶಿರಾಲಿ, ವೀಣಾ ಓಶಿಮಠ, ಉಮೇಶ ಬಿಜಾಪುರ, ಗುರು ಕಾಮತ, ಫಣಿರಾಜ ಹದಳಗಿ, ವಿನಾಯಕ ರಾಯ್ಕರ, ಶ್ರೀಕಾಂತ ಸಾನು, ಮಂಜುನಾಥ ಹರಮಲಕರ, ರವಿ ಹಾವೇರಿ, ಜಯಸುಧಾ ಭೋವಿ, ಕೆಂಜೋಡಿ ಗಲಬಿ, ಮಂಜು ಪಾಟೀಲ, ಬಸವರಾಜ ಹರಿಜನ, ಮಂಜುನಾಥ ಹರಿಜನ, ಸಂಜು ಪಿಸೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ