ಶಿಗ್ಗಾವ್

ಭಾಜಪ: ಸ್ವಚ್ಛ ಸಂಡೆ ಅಭಿಯಾನ

ಭಾಜಪ: ಸ್ವಚ್ಛ ಸಂಡೆ ಅಭಿಯಾನ

ಶಿಗ್ಗಾವಿ 30 : ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಓಣಿಯ ಸುತ್ತಮುತ್ತಲಿನ ಪ್ರದೇಶವನ್ನ ಭಾರತೀಯ ಜನತಾ ಪಕ್ಷದ ಶಿಗ್ಗಾವಿ ಯುವ ಮೋರ್ಚಾ ವತಿಯಿಂದ ಸ್ವಚ್ಚ ಮಾಡುವ ಮೂಲಕ ಸ್ವಚ್ಚ ಸಂಡೆ ಅಭಿಯಾನವನ್ನ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾದ ಶಿಗ್ಗಾವಿ ತಾಲೂಕಾದ್ಯಕ್ಷ ಶಿವರಾಜ ರಾಯಣ್ಣವರ ನಮ್ಮ ಆರೋಗ್ಯ ದೃಷ್ಟಿಯಿಂದ ನಮ್ಮ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಇದು ಸ್ವಚ್ಚ ಭಾರತ ಎಂಬುದು ಮೋದಿಯವರ ಕನಸಾಗಿದ್ದು ಭಾಜಪ ಯುವ ಮೋರ್ಚಾವು ಆ ಕಾರ್ಯ ಮಾಡುತ್ತಿದೆ ಇದಕ್ಕೆ ಯುವ ಮೋರ್ಚಾದ ಕಾರ್ಯಕರ್ತರ ಸೇವಾ ಮನೋಭಾವನೆಯೇ ಕಾರಣ ಎಂದರು.

ಭಾಜಪ ಅದ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯ ರಮೇಶ ವನಹಳ್ಳಿ, ರೇಣುಕನಗೌಡ ಪಾಟೀಲ, ಕಾಶಿನಾಥ ಕಳ್ಳಿಮನಿ, ವಿನಯ ಮುಂಡಗೋಡ, ಚೇತನ ಕಲಾಲ, ಸಚಿನ ಮಡಿವಾಳರ, ಮಂಜುನಾಥ ಮಿರ್ಜಿ, ಶಂಕರಗೌಡ್ರ ಪಾಟೀಲ, ಭರತೇಶ ಬಳಿಗಾರ, ರಾಘವೇಂದ್ರ ಆತಡಕರ, ಮಂಜುನಾಥ ಪವಾರ ಸೇರಿದಂತೆ ಭಾಜಪದ ಪಧಾಧಿಕಾರಿಗಳು ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿ ಓದಿ