ಆಲಗೂರಗೆ ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿ
ಸಿಂದಗಿ 04: ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು, ಕೋಲಾರ ಜಿಲ್ಲೆಯ ರೋಟರಿ ಸಂಸ್ಥೆ ಹಾಗೂ ಸ್ವರ್ಣಭೂಮಿ ಫೌಂಡೇಷನ್ ಕೊಡಮಾಡುವ ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿ ಮೌಲಾಲಿ ಆಲಗೂರಗೆ ಆಯ್ಕೆಯಾಗಿದ್ದಾರೆ. ಇವರನ್ನು ಅ.07 ಭಾನುವಾರದಂದು ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ನಡೆಯಲಿರುವ ನುಡಿ ಸಂಭ್ರಮ, ವಚನಗೋಷ್ಠಿ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಶತಶೃಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯಾಧ್ಯಕ್ಷರಾದ ಬಿ. ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.