ಶಿಗ್ಗಾವ್

ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ

ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ

ಶಿಗ್ಗಾವಿ 13: ನಾಡಿನ ಏಳಿಗೆಗಾಗಿ ಅನೇಕ ಮಹಾತ್ಮರು, ಶರಣರು ಶ್ರಮಿಸಿದ್ದಾರೆ. ಅವರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು ಪ್ರಮುಖರಾಗಿದ್ದಾರೆ. ಅಂತಹ ಮಹಾತ್ಮರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಎಸ್‌.ಆರ್‌.ಕಾರಗಿ ಹೇಳಿದರು.  

ತಾಲ್ಲೂಕಿನ ಬಂಕಾಪುರ ಪಟ್ಟಣದ ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನ, ಕೀರ್ತಿ ಪ್ರೌಢ ಶಾಲೆ, ಕೀರ್ತಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿವೇಕಾನಂದರಲ್ಲಿನ ದೇಶಾಭಿಮಾನ ಮೂಡಬೇಕು. ದೇಶಕ್ಕಾಗಿ ಸ್ವಯಂ ಪ್ರೇರಣೆಯಿಂದ ಸೇವೆ ಅರ​‍್ಿಸಬೇಕು. ಜನಿಸಿದ ನೆಲಕ್ಕೆ ಕೊಡುಗೆ ನೀಡುವ ಚಿಂತನೆ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಬೆಳೆಯಬೇಕು. ಅದರಿಂದ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು. 

ಕೀರ್ತಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಎಂ.ಬಿ.ಉಂಕಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಸ್‌.ಬಿ.ಕುರಬರ, ಜಗದೀಶ ಪುರದ, ಗೀರೀಶ ಕುರಂದವಾಡ, ಸುರೇಖಾ ಕುರಂದವಾಡ, ಎಂ.ವಿ.ಗಾಡದ, ಚಂದ್ರು ತಳವಾರ, ಯಲ್ಲಪ್ಪ ಹುತ್ತಿಯವರ, ಎ.ಸಿ.ಹಿರೇಮಠ, ಎಸ್‌.ಜಿ.ಹಾದಿಮನಿ, ಎಂ.ಎನ್‌.ಚಿನಿವಾರ, ಪ್ರಕಾಶ ದುಗಲದ, ಬಿ.ಎಸ್‌.ದುಂಡಪ್ಪನವರ, ನಂದಾ ಪಾಟೀಲ, ವೀರಣ್ಣ ಕುಲಕರ್ಣಿ, ಪ್ರವೀಣ ಕೊರವರ ಸೇರಿದಂತೆ ಶಾಲಾ, ಕಾಲೀಜಿನ ಸಿಬ್ಬಂದಿ ಇದ್ದರು. 


ಸುದ್ದಿ ಓದಿ