ಹೊಳಲು: ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಗೆ ಶೇ.93ರಷ್ಟು ಫಲಿತಾಂಶ
ಹೂವಿನಹಡಗಲಿ 23: ಪ್ರಸ್ತುತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶೇ.93.14ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 102 ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದೀಪಾ 618(ಶೇ.99) ಶಾಲೆಯ ಇತಿಹಾಸಲ್ಲೇ ಅತ್ಯಧಿಕ ಅಂಕಗಳಿಸಿದ್ದಾರೆ. ಸುಜಾತ 616 (ಶೇ.98). ಜಿ.ರೇಣುಕಾ 608 (ಶೇ.97), ಎನ್.ರಾಜು 605 (ಶೇ.97). ಎಂ.ಪೂಜಾ 601 (ಶೇ.96) ರಷ್ಟು ಫಲಿತಾಂಶ ಬಂದಿದೆ.
ಸರಣಿ ಪೂರ್ವ ಸಿದ್ದತಾ ಪರೀಕ್ಷೆ, ಪಾಲಕರ ಮನೆ ಭೇಟಿ, ಎಲ್ಲಾ ವಿದ್ಯಾರ್ಥಿಗಳ ವೈಯಕ್ತಿಕ ಗಮನ, ಗಣಿತ ವಿಜ್ಞಾನ,ಇಂಗ್ಲೀಷ ಕಠಿಣ ವಿಷಯಗಳಿಗೆ ಆದ್ಯತೆ, ಬೆಳಗಿನ ವಿಶೇಷ ತರಗತಿ, ಸಂಜೆಯ ಗುಂಪು ಅಧ್ಯಯನ ಹೀಗೆ ಹಲವು ಕಾರ್ಯಕ್ರಮಗಳು ಫಲಿತಾಂಶ ಸುಧಾರಣೆಗಾಗಿ ವರ್ಷ ಪೂರ್ತಿ ಮಾಡಲಾಗಿತ್ತು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಎನ್.ಹಳ್ಳಿಗುಡಿ ಹೇಳಿದರು.
ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಎಂ.ದೀಪಾ ಹಾಗೂ ಇತರರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ 618 ಅಂಕಗಳಿಸುವುದು ಸುಲಭವಲ್ಲ.ಇದರ ಹಿಂದೆ ಅವಿರತ ಶ್ರಮ ಇದೆ ಜತೆಗೆ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಚಂದ್ರ್ಪ ತಿಳಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಗುರು ಹಳ್ಳಿ ಮಂಜುನಾಥ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು/ಪದಾಧಿಕಾರಿಗಳು,ಶಿಕ್ಷಕ ವೃಂದ, ಅಭಿನಂದಿಸಿದ್ದಾರೆ.