ಜಗತ್ತಿಗೆ ಭಾರತದ ಶ್ರೇಷ್ಠತೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು
ಶಿಗ್ಗಾವಿ 20: ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠತೆಯನ್ನು ಇಡಿ ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನ ಯುವಕರು ದೇಶದ ಭವಿಷ್ಯದ ನಿರ್ಮಾರ್ತೃಗಳು ಅಂತವರು ಸನ್ಮಾರ್ಗದಲ್ಲಿ ನಡೆದು ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಯುವಶಕ್ತಿಯನ್ನು ಜಾಗೃತಗೊಳಿಸಿದ ದಿವ್ಯ ಮಾಂತ್ರಿಕ ಶಕ್ತಿ ಸ್ವಾಮಿ ವಿವೇಕಾನಂದರಾಗಿದ್ದರು ಎಂದು ಕಸಾಪ ತಾಲೂಕಾಧ್ಯಕ್ಷ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು
ಪಟ್ಟಣದ ಚನ್ನಪ್ಪ ಕುನ್ನೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಧರ್ಮವೇ ದೇಶದ ಆತ್ಮ ಎಂದು ಹೇಳುವ ಮೂಲಕ ಧರ್ಮದ ತಳಹದಿಯ ಮೇಲೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ ಎಂದು ಹೇಳಿದರು
ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದ ವಿವೇಕ ಜಾಗೃತಿ ಬಳಗದ ಸದಸ್ಯ ಶ್ರೀಮತಿ ಹೇಮಾವತಿ ಗಾಣಿಗೇರ ವಿವೇಕಾನಂದರ ಆದರ್ಶ ಇಂದಿನ ಜನತೆಗೆ ಮಾರ್ಗದರ್ಶಿಯಾಗಿದೆ. ಅವರ ತತ್ವಾದರ್ಶಗಳನ್ನು ಅಳವಡಿಸಿಕೂಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾದ್ಯಾಯ ಸಿ. ಟಿ. ಪಾಟೀಲ ಮಾತನಾಡಿ ಪ್ರತಿಯೊಬ್ಬರಲ್ಲಿ ಉತ್ತಮಿಕೆ ಇರುತ್ತದೆ ವಿವೇಕಾನಂದರಂತಹ ಮಹಾತ್ಮರ ಬದುಕು ಅಂತ ಉತ್ತಮಿಕೆಯನ್ನು ಜಾಗೃತಗೊಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಡಿ.ಎ.ವಡ್ಡರ, ಪ್ರೇಮಾ.ಯತ್ನಳ್ಳಿ, ಶಿಕ್ಷಕರಾದ ಎಂ. ಎ. ಗಾಣಿಗೇರ ಇದ್ದರು. ಪ್ರಾರಂಭದಲ್ಲಿ ಐ. ವಿ. ತಾಡಪತ್ರಿಮಠ ಸ್ವಾಗತಿಸಿದರು. ಜೆ. ಎಂ. ದೇವರಮನಿ ವಂದಿಸಿದರು. ಆಸ್ಮಾ ಕಲಾಯಗಾರ ಕಾರ್ಯಕ್ರಮ ನಿರೂಪಿಸಿದರು.