ಸ್ವಾಮಿ ರಾಮಗಿರಿ ಹೇಳಿಕೆ ಖಂಡಿಸಿ ಪಿ.ಐ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಘಟಪ್ರಭಾ,24: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಿನ್ನಾಳ ನಗರದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಗುರುಗಳಾದ ಪ್ರವಾದಿ ಮಹಮ್ಮದ ಪೈಗಂಬರರವರ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿದ ಸ್ವಾಮಿ ರಾಮಗಿರಿ ಹೇಳಿಕೆಯನ್ನು ಖಂಡಿಸಿ ಪಟ್ಟಣದ ಅಹಲೇ ಸುನ್ನತ ವಲ್ ಜಮಾತದ ವತಿಯಿಂದ ಘಟಪ್ರಭಾ ಪೊಲೀಸ ಠಾಣೆಯ ಪಿ.ಐ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶನಿವಾರ ಮುಂಜಾನೆ ಪಟ್ಟಣದ ಜುಮ್ಮಾ ಮಸ್ಜಿದ, ನೂರಾನಿ ಮಸ್ಜಿದ ಹಾಗೂ ಮೊಹ್ಮದಿಯಾ ಮಸ್ಜಿದದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಪಟ್ಟಣದ ಮುಸ್ಲಿಂ ಬಾಂಧವರು ಠಾಣೆಗೆ ತೆರಳಿ ಪದೆ ಪದೆ ದೇಶದಲ್ಲಿ ಇಸ್ಲಾಂ ಧರ್ಮ ಹಾಗೂ ಪ್ರವಾದಿ ಅವರ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿ, ಇನ್ನೊಬ್ಬರ ಧಾರ್ಮಿಕ ಭಾವನೆಗಳ ಕೆರಳಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ನಡೆಯುತ್ತಿದೆ. ಇಂತಹ ಘಟನೆಗಳಿಗೆ ಕಡಿವಾನ ಹಾಕುವ ನಿಟ್ಟಿನಲ್ಲಿ ಸ್ವಾಮಿ ರಾಮಗಿರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಮುಂಬೈ ಮೂಲದ ಮುಸ್ಲಿಂ ಧರ್ಮ ಗುರುಗಳಾದ ಸಲ್ಮಾನ ಅಝಹರಿ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದ್ದು, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಪಿ.ಐ ಬಸವರಾಜ ಕಾಮನಬೈಲ ಅವರು ಮನವಿಯನ್ನು ಸಂಬಂದಿಸಿದ ಮೇಲಾಧಿಕಾರಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಜಮಾತುಗಳ ಅಧ್ಯಕ್ಷರಾದ ಶೌಕರ ಕಬ್ಬೂರ, ಮೊಹ್ಮದ ಮೋಮಿನ, ಮುಸ್ತಾಕಅಹ್ಮದ ಖಾಜಿ, ಹಿರಿಯರಾದ ನೂರ ಪೀರಜಾದೆ, ಮೌಲಾನಾ ಬುರಹಾನ ಅತ್ತಾರ, ಹೈದರಅಲಿ ಮನಿಯಾರ, ಸರಫರಾಜ ಬಾಗವಾನ, ಅಬ್ದುಲ ಪೆಂಡಾರಿ, ಮೋದಿನಸಾಬ ಕಬ್ಬೂರ, ಹಜರತಸಾಬ ಕಬ್ಬೂರ, ದಿಲಾವರ ನದಾಫ, ಮೌಲಾ ಬಾಗವಾನ, ಜಹಾಂಗೀರ ಬಾಗವಾನ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ದಿಲಾವರ ಬಾಳೇಕುಂದ್ರಿ, ಮದಾರ ನಾಲಬಂದ, ಮುಕ್ಕದರ ಮಕಾನದಾರ, ಶಾಹೀದ ಹುದಲಿ, ಜಮಾಲ ಸಯ್ಯದ, ಅಕೀಬ ಸಯ್ಯದ, ಅಕೀಲ ಕಬ್ಬೂರ, ಮುನೀರ ಮೇಸ್ತ್ರಿ, ಶಾನೂರ ಡಾಂಗೆ, ತನವೀರ ನಾಲಬಂದ, ಅಜರೋದ್ದಿನ ಅತ್ತಾರ, ಪೊಲೀಸ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು .