ಬೈಲಹೊಂಗಲ

ಸುವರ್ಣ ಸ್ವಾತಂತ್ರ್ಯ ಮಹೋತ್ಸವ: ಹುತಾತ್ಮ ವೀರಯೋಧರ ಕುಟುಂಬಸ್ಥರಿಗೆ ಸತ್ಕಾರ

ಸುವರ್ಣ ಸ್ವಾತಂತ್ರ್ಯ ಮಹೋತ್ಸವ: ಹುತಾತ್ಮ ವೀರಯೋಧರ ಕುಟುಂಬಸ್ಥರಿಗೆ ಸತ್ಕಾರ

ಬೈಲಹೊಂಗಲ 23: ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವುದು ಎಲ್ಲ ನಾಗರೀಕರ ಕರ್ತವ್ಯವಾಗಿದೆ ಎಂದು ಎಸ್‌.ಎನ್‌.ವ್ಹಿ.ವ್ಹಿ.ಎಸ್‌. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಸಿ.ಎಸ್‌.ಸಾಧುನವರ ಹೇಳಿದರು. 

ಅವರು ಪಟ್ಟಣದ ಮೂರುಸಾವಿರಮಠದ ಸಭಾಭವನದಲ್ಲಿ  ನೀ.ವ್ಹಿ.ವ ಸಂಸ್ಥೆಯ ಎಸ್‌.ಜಿ.ವ್ಹಿ. ಕಲಾ ವಾಣಿಜ್ಯ  ಮತ್ತು ವಿಜ್ಞಾನ ಸಂಯುಕ್ತ ಪದವಿ ಪೂರ್ವ ಕಾಲೇಜು,  25 ಕೆಎಆರ್ ಬಿಎನ್ ಎನ್‌ಸಿಸಿ ಇವರ ಸಹಯೋಗದಲ್ಲಿ ಸುವರ್ಣ ಸ್ವಾತಂತ್ರ್ಯ ಮಹೋತ್ಸವ ನಿಮಿತ್ತ ದೇಶ ಸೇವೆ ಮಾಡಿ ಹುತಾತ್ಮರಾದ ತಾಲೂಕಿನ ವೀರಯೋಧರಿಗೆ ಶತ ಶತ ನಮನ ಹಾಗೂ ಅವರ ಪರಿವಾರದವರಿಗೆ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ದೇಶದಲ್ಲಿ ಶಾಂತಿ ನೆಲೆಸಲು ಆ ಮೂಲಕ ಅಭಿವೃದ್ಧಿ ಸಾಧಿಸಲು ಗಡಿಯನ್ನು ಕಾಯುತ್ತಿರುವ ಸೈನಿಕರು ತಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದಾರೆ.  ಸೈನಿಕರ ತ್ಯಾಗ ಪರಿಶ್ರಮದ ಫಲವಾಗಿ ದೇಶ ಶಾಂತವಾಗಿದ್ದು, ಸ್ವಾತಂತ್ರ್ಯದ ಸವಿಯನ್ನು ನಮಗೆ ಉಣ್ಣಲು ಸಾಧ್ಯವಾಗುತ್ತಿದೆ ಎಂದರು. 

ಮುಖ್ಯ ಅತಿಥಿಗಳಾಗಿ ನಾಯಕ ಸುಭೇದಾರ, ಮನವಿಂದರ ಸಿಂಗ್, ಸಿ.ಎಚ್‌.ಎಂ ಬಾಲಕೃಷ್ಣ ಕುಂಬಾರ, ಪ್ರಾಚಾರ್ಯ ಎನ್‌.ಎಸ್‌.ಚಿಲಮೂರ ಆಗಮಿಸಿದ್ದರು. 

ಕ್ಯಾಪ್ಟನ ಎಂ.ಸಿ.ಹೇಮಗಿರಿಮಠ ಕಾರ್ಯಕ್ರಮದ ಉದ್ದೇಶ ಕುರಿತು ತಿಳಿಸಿದರು. 

ಹಿರಿಯ ಉಪನ್ಯಾಸಕ ಎಸ್‌.ಆರ್‌.ಕಲಹಾಳ ಮಾತನಾಡಿದರು. ವ್ಹಿ.ಎಂ.ಬಸಿನಾಯ್ಕರ ವಂದಿಸಿದರು. ಎಸ್‌.ಎಸ್‌.ಬೆಳ್ಳಿಗಟ್ಟಿ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ, ಎನ್‌ಸಿಸಿ ಕೆಡೆಟಗಳು ಹುತಾತ್ಮ ಯೋಧರ ಕುಟುಂಬಸ್ಥರು ಇದ್ದರು. 


ಸುದ್ದಿ ಓದಿ