ಜಮಖಂಡಿ

ಉಪತಹಶೀಲ್ದಾರ ವೈ.ಎಚ್‌.ದ್ರಾಕ್ಷಿ ಅಮಾನತು

ಉಪತಹಶೀಲ್ದಾರ ವೈ.ಎಚ್‌.ದ್ರಾಕ್ಷಿ ಅಮಾನತು

ಜಮಖಂಡಿ 15: ತಹಶೀಲ್ದಾರ್ ಕಾರ್ಯಾಲಯದಲ್ಲಿ ಭೂಮಿ ವಿಭಾಗದಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿದ್ದ ಉಪತಹಶೀಲ್ದಾರ ವೈ,ಎಚ್, ದ್ರಾಕ್ಷಿ ಅವರನ್ನು ಅಮಾನತು ಮಾಡಿ ಅ, 10ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಭೂಮಿ ವಿಭಾಗದ ಶಿರಸ್ತೇದಾರ ಉಪತಹಶೀಲ್ದಾರ, ವೆ,.ಎಚ್,ದ್ರಾಕ್ಷಿ ತಹಶೀಲ್ದಾರ್ ಸದಾಶಿವ ಮಕ್ಕೋಜಿ ಗಮನಕ್ಕೆ ಬಾರದೇ, ಹಳೆ ತಹಶೀಲ್ದಾರರೊಬ್ಬರ ಸಹಿಯನ್ನು ಮಾಡಿಕೊಂಡು ತಾಲ್ಲೂಕಿನ ಜಂಬಗಿ ಕೆ.ಡಿ ಗ್ರಾಮದ ಸರ್ವೆ ನಂ. 97/1, 99/1, 100/1, 100/3, 100/4, 100/6 4 ಸಂಬಂಧಿಸಿ ಜಮೀನ ವಹಿವಾಟಿಗೆ  ಜಮಖಂಡಿ ತಹಶೀಲ್ದಾರ ಪತ್ರ ಸಂಖ್ಯೆ ಕೆಎಲ್‌ಆರ್‌ಎಸ್‌ಆರ್ 23/31 ಜಂಬಗಿ ಕೆಡಿ, 28,2,2022ರ ಕೆ,ಎಲ್,ಆರ್ ಶರ್ತ ಕಡಿಮೆ ಆಗಿರುವುದನ್ನು ಗಮನಿಸಿ, ಈ ಸರ್ವೆ ನಂಬರ್‌ಗಳ ದಾಖಲೆಗಳನ್ನು ಪರೀಶೀಲನೆ ಮಾಡಿದಾಗ ನೈಜತೆಯ ಬಗ್ಗೆ ಅನುಮಾನ ವ್ಯಕ್ತವಾಯಿತು. ಇದಕ್ಕೆ ಕಾರಣರಾದ ಭೂಮಿ ವಿಭಾಗದ ಶಿರಸ್ತೇದಾರ ವೈ.ಎಚ್‌. ದ್ರಾಕ್ಷಿ ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ತಹಶೀಲ್ದಾರರು ಸಲ್ಲಿಸಿರುವ ವರದಿ ಪರೀಶೀಲನೆ ಮಾಡಿ ಜಿಲ್ಲಾಧಿಕಾರಿಗಳು ಬೆಳಗಾವಿ ಆಯುಕ್ತರಿಗೆ ನೀಡಿರುವ ಮಾಹಿತಿಯನ್ನು ಪರಿಗಣಿಸಿ ಸೇವೆಯಿಂದ ಅಮಾನತಿನಲ್ಲಿಟ್ಟು ಶಿಸ್ತು ಕ್ರಮ ಜರುಗಿಸಬೇಕು ಎಂದು ಆದೇಶಿಸಿದ್ದಾರೆ. 


ಸುದ್ದಿ ಓದಿ