ರಾಣೆಬೆನ್ನೂರ

ರಾಣೀಬೆನ್ನೂರಿನಲ್ಲಿ ವಿಜೃಂಬಿಸಿದ ಸೂರ್ಯನಾರಾಯಣಸ್ವಾಮಿ ಮೆರವಣಿಗೆ

ರಾಣೀಬೆನ್ನೂರಿನಲ್ಲಿ ವಿಜೃಂಬಿಸಿದ ಸೂರ್ಯನಾರಾಯಣಸ್ವಾಮಿ ಮೆರವಣಿಗೆ

ರಾಣೀಬೆನ್ನೂರ 20: ಸಮಾಜದ ಅಭಿವೃದ್ಧಿಯಲ್ಲಿ ಯುವಕರು ತಮ್ಮ ಸಮಯವನ್ನು ನಡೆಯಲಿರುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಿಡುವುದರ ಮೂಲಕ ಆರಾಧ್ಯ ದೈವ ಭಗವಾನ್ ಸೂರ್ಯನಾರಾಯಣ ಸ್ವಾಮಿಯ ಆರಾಧನೆ ಮೂಲಕ ಧರ್ಮ ಮತ್ತು ಸಮುದಾಯದ ಇತಿಹಾಸ ಸಂಸ್ಕೃತಿಯನ್ನು ಪುನರುತ್ಥಾನ ಗೊಳಿಸಲು ಮುಂದಾಗಬೇಕಾಗಿದೆ ಎಂದು ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ್ ಸಮಾಜದ ಅಧ್ಯಕ್ಷ ರಮೇಶ ರುದ್ರಪ್ಪ ಕಲಾಲ ಹೇಳಿದರು. 

ಅವರು ಬಸವನಗುಡಿ ನಗರದ ಇಂದಿರಾ ಭವನದಲ್ಲಿ ನಡೆದ ಕುಲಗುರು ಸೂರ್ಯನಾರಾಯಣಸ್ವಾಮಿಯ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಕ್ಕೆ ಭಗವಾನ್ ಆರಾಧ್ಯ ದೈವವಾಗಿದ್ದು ವೇದ-ಇತಿಹಾಸ ಕಾಲದಿಂದಲೂ ಆರಾಧನೆಯ ಮೂಲಕ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಬಂದಿರುವ ಇತಿಹಾಸವಿದೆ. ಯುವಕರು ಇತಿಹಾಸ ಅವಲೋಕನ ಮಾಡುವುದರ ಮೂಲಕ ಜಾತ್ರೆ, ಉತ್ಸವ, ಹಬ್ಬ-ಹರಿದಿನ ಆಚರಿಸಿ ಸಂಸ್ಕೃತಿ ಉಳಿಸುವುದರ ಜೊತೆಗೆ ಭವಿಷ್ಯದ ಜನಾಂಗಕ್ಕೆ ತಿಳಿಸುವ ಕೆಲಸ ನಡೆಯ ಬೇಕಾದ ಅಗತ್ತಯವಿದೆ ಎಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕುಮಾರ ಕುಂಚೂರಕರ್, ಸದಾನಂದ ಕಲಾಲ, ಪ್ರಧಾನ ಕಾರ್ಯದರ್ಶಿ ವಿನಾಯಕ ಶಿಗ್ಲೀಕರ್, ಗೌರವ ಕಾರ್ಯದರ್ಶಿ ಅನಿಲ್ ಕಲಾಲ ಪರಶುರಾಮ ಡೋಂಗರೆಕರ್, ಸಹಕಾರ್ಯದರ್ಶಿ ಪರಮೇಶ ಗುಡ್ಡದ, ಖಜಾಂಚಿ ಪರಶುರಾಮ ಅಂಕುಶಖಾನಿ, ಕರಬಸಪ್ಪ ಪತ್ತೇಪುರಿ, ಕರಬಸಪ್ಪ ಬುಜುರುಕರ್,  ಮುಖಂಡರಾದ ಆರ್.ಬಿ.ಕಲಾಲ, ಡಿ.ಎ.ಕಲಾಲ, ಎಸ್.ಎ.ಕಲಾಲ, ಯುವ ಮುಖಂಡರಾದ ರಾಘವೇಂದ್ರ ಕಲಾಲ, ಶಿವಾಜಿ ಕಲಾಲ, ಮೋಹನ ಕಲಾಲ, ದೀಪಕ್ ಕಲಾಲ, ವಿನಾಯಕ ಕಲಾಲ, ರವಿ ಕಲಾಲ, ಗುರುರಾಜ ಎಚ್.ಕೆ. ಕಾಂತೇಶ ಶಿಗ್ಲೀಕರ್, ಕೃಷ್ಣಮೂರ್ತಿ ಶಿಗ್ಲೀಕರ್, ರಮೇಶ್ ಕಲ್ಯಾಣಕರ್, ಪ್ರಕಾಶ ಕಲ್ಯಾಣಕರ್, ಯಲ್ಲಪ್ಪ ಕಲಾಲ, ಕಿರಣ ಕುಂಚೂರಕರ್, ವಿನೋದ್ ಕಲಾಲ ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಹಿರಿಯರು, ಯುವನಾಯಕರು ಪಾಲ್ಗೊಂಡಿದ್ದರು. 

ಸಂಗಂ ವೃತ್ತದಲ್ಲಿರುವ ಶ್ರೀರಾಮ ಮಂದಿರದ ಆವರಣದಿಂದ ಹೊರಟ ಭವ್ಯ ಅಲಂಕೃತ ರಥದಲ್ಲಿ ಶೃಂಗರಿಸಿದ ಸೂರ್ಯನಾರಾಯಣ ಸ್ವಾಮಿಯ ಭವ್ಯ ತೈಲ ಭಾವ ಚಿತ್ರದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವನಗುಡಿ ನಗರದಲ್ಲಿರುವ ಸ್ವಾಮಿಯ ಮಂದಿರದಲ್ಲಿ ಸಾಂಗತ್ಯಗೊಂಡಿತು. ವಿವಿಧ ವಾದ್ಯ ಮೇಳಗಳು ಮೆರವಣಿಗೆಗೆ ಮೆರಗು ನೀಡಿತು. ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಣೆ ನಡೆಯಿತು.

ಸುದ್ದಿ ಓದಿ