ಶಿಗ್ಗಾವ್

ಸತ್ಯಾಗ್ರಹ ಸ್ಥಳಕ್ಕೆ ಅಪರ್ ಜಿಲ್ಲಾಧಿಕಾರಿ ಯೋಗೇಶ್ವರ ಭೇಟಿ

ಸತ್ಯಾಗ್ರಹ ಸ್ಥಳಕ್ಕೆ ಅಪರ್ ಜಿಲ್ಲಾಧಿಕಾರಿ ಯೋಗೇಶ್ವರ ಭೇಟಿ

ಶಿಗ್ಗಾವಿ ಕಳೆದ 22 ದಿನದಿಂದ ಡಾ. ಬಿ.ಆರ್. ಅಂಬೇಡ್ಕರ ಮೂರ್ತಿ ಸ್ಥಾಪಿಸಬೇಕೆಂದು ನಡೆಸುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಅಪರ್ ಜಿಲ್ಲಾಧಿಕಾರಿ ಯೋಗೇಶ್ವರ ಭೇಟಿ ನೀಡಿ ಸಂಘಟಕರಾದ ನ್ಯಾಯವಾದಿ ಹನುಮಂತ ಬಂಡಿವಡ್ಡರ ಮತ್ತು ಬಾಬಕ್ಕಾ ಬಳ್ಳಾರಿ ಅವರ ಬೇಡಿಕೆಗಳನ್ನು ಆಲಿಸಿದರು.

ಸಂಘಟಕರನ್ನು ಉದ್ದೇಶಿಸಿ ಮಾತನಾಡಿದ ಅವರು ನಿಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಸರಕಾರದ ಗಮನಕ್ಕೆ ತರುತ್ತೇವೆ ಎಂದು ಭರವಸೆಯನ್ನು ನೀಡಿ ನಿಮ್ಮ ಸತ್ಯಾಗ್ರಹವನ್ನು ಹಿಂಪಡೆಯಲು ತಿಳಿಸಿದರು.

ಈ ಸಂದರ್ಭದಲ್ಲಿ ಸವಣೂರ ಉಪವಿಬಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಸಿಪಿಐ ಬಸವರಾಜ ಹಳಬಣ್ಣವರ, ಪ್ರಭಾರಿ ತಾಲೂಕ ದಂಡಾಧಿಕಾರಿ ಬಸವರಾಜ ಹೊಂಕಣದವರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿ ಓದಿ