ಇಂಡಿ

ಮಕ್ಕಳೊಂದಿಗೆ ಕುಳಿತು ಊಟಮಾಡಿದ ಸುನಂದಾ ವಾಲಿಕಾರ

ಮಕ್ಕಳೊಂದಿಗೆ ಕುಳಿತು ಊಟಮಾಡಿದ ಸುನಂದಾ ವಾಲಿಕಾರ

ಇಂಡಿ 28: ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅನಾಥ ಮಕ್ಕಳು ಏಕ ಪೋಷಕ ಇತರೆ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಬಾಲಕಿಯರ ವಿದ್ಯಾಭ್ಯಾಸ ಹಾಗೂ ಸುರಕ್ಷತೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಗಳಿವೆ. ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಕ್ಕೆ ಇಂದು ಮಧ್ಯಾಹ್ನ 1ಗಂಟೆಗೆ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸುನಂದಾ ವಾಲಿಕಾರ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಊಟ ಮಾಡಿ ಮಕ್ಕಳೊಂದಿಗೆ ಬೆರೆತು ಮಕ್ಕಳಿಗೆ ಸೌಲಭ್ಯಗಳನ್ನು ಸದ್ವಿನಿಯೋಗ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನವನ್ನು ನೀಡಿದರು.  

ಅಧ್ಯಕ್ಷರು ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿಕೊಡುವ ಭರವಸೆ ನೀಡಿದರು.  

ಶಾಲೆಯ ಮುಖ್ಯ ಗುರುಗಳಾದ ಜಿ.ಸಿ.ಗೌರ ಶಿಕ್ಷಕಿಯರಾದ ವಿ.ಜಿ.ಸರಸಂಬಿ, ಎಸ್‌.ಎಸ್‌.ಬಿರಾದಾರ ನಿಲಯ ಮೇಲ್ವಿಚಾರಕಿ ಎಸ್ ಆರ್ ಜಡಪೇಕರ, ಬಿ.ಎಮ್‌. ಬಡಿಗೇರ್ ಹಾಗೂ ಜೆ ಎಸ್ ತೇಲಿ ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು. 


ಸುದ್ದಿ ಓದಿ