ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ಬ್ಯಾಡಗಿ 31: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ನಿವೃತ್ತ ಮುಖ್ಯೋಪಾಧ್ಯಯ ಎಂ ಎಂ ಕಂಠಿ ಹೇಳಿದರು.ಅವರು ಸ್ಥಳೀಯ ಗಂಗಾ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆಯ ಗಂಗಾ ಜೀನಿಯಸ್ ಅಕಾಡಮಿಯ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಏರಿ್ಡಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಊರು ಮೆಚ್ಚಿದ ಶಿಕ್ಷಕ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಮಾನಸಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಬೇಸಿಗೆ ಶಿಭಿರಗಳು ಪ್ರಮುಖ ಪಾತ್ರವಹಿಸುತ್ತದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲೆಯ ಜೊತೆಗೆ ಅನೇಕ ತರಬೇತಿಗಳು ಮಾರ್ಗದರ್ಶನ ಮಾಡುವುದು ಅತ್ಯವಶ್ಯಕವಾಗಿದೆ ಅಂತಹ ಕಾರ್ಯವನ್ನು ನಗರದ ಗಂಗಾ ಜೀನಿಯಸ್ ಅಕಾಡಮಿಯವರು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ನಿವೃತ್ತ ಉಪನ್ಯಾಸಕ ಎಸ್ ಡಿ ಬಾಲಜಿರಾವ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಗಂಗಾ ಜೀನಿಯಸ್ ಅಕಾಡಮಿಯ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ಪ್ರೌಢ ಹಾಗೂ ಪಿಯುಸಿಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ, ಐಚ್ಚಿಕ ವಿಷಯಗಳ ಹಾಗೂ ಯೋಗ ತರಬೇತಿ ನೀಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರಿ್ಡಸಲಾಗಿತ್ತು.ಸಮಾರಂಭದ ಅಧ್ಯಕ್ಷತೆಯನ್ನು ರಾಘವೇಂದ್ರ ಬೊವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಚ್.ಟಿ.ಭರಮಗೌಡ್ರ, ಮಂಜುನಾಥ ಹಾದಿಮನಿ,ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜೀವರಾಜ ಛತ್ರದ, ಕನ್ನಡ ಸಾಹಿತ್ಯ ಪರಿಷತ್ನ ತಾಲೂಕಾ ಅಧ್ಯಕ್ಷ ಬಿ.ಎಂ.ಜಗಾಪೂರ, ಡಾ. ಬಿ ಎಂ ಬೇವಿನಮರದ ಸಾಹಿತಿಗಳಾದ ಸಿ ಎನ್ ಬಣಕಾರ,ಗೀರೀಶ ಇಂಡಿಮಠ, ಡಾ. ಸತೀಶಕುಮಾರ ನಾಯ್ಕ ಸೇರಿದಂತೆ ಸಂಸ್ಥೆಯ ನಿರ್ಧೆಶಕರು ಇದ್ದರು.