ಅಧಿಕ ದರಕ್ಕೆ ಆಕರ್ಷಣೆಯಾಗಿ ಮಹಾರಾಷ್ಟ್ರಕ್ಕೆ ಕಬ್ಬು ಸಾಗಾಣೆ
Sugarcane transport to Maharashtra attracts high prices
ಮಾಂಜರಿ 14: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ, ಆಕಾಲಿಕ ಮಳೆ, ಹವಾಮಾನ ವೈಫಲ್ಯ, ವಿವಿಧ ರೋಗಗಳಿಂದಾಗಿ ಕಬ್ಬಿನ ಉತ್ಪಾದನೆಯ ಜೊತೆಗೆ ಇಳುವರಿ ಕುಂಠಿತಗೊಂಡಿದ್ದು, ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಅಧಿಕ ದರದ ಆಕರ್ಷಣೆಯ ಜಾಲ ಬೀಸಿದ್ದರಿಂದ ನಮ್ಮ ಗಡಿಭಾಗದ ರೈತರು ಮಹಾರಾಷ್ಟ್ರಕ್ಕೆ ಕಬ್ಬು ಸಾಗಿಸುತ್ತಿದ್ದಾರೆ. 'ರಾಜ್ಯದ ಸಕ್ಕರೆ ಕಾರ್ಖಾನೆಗಳು ಸರಾಸರಿ 3300 ರೂ. ಪಟನಿಗೆ ದರ ಘೋಷಿಸಿವೆ. ರಾಜ್ಯದ ಗಡಿಭಾಗದ ಬೇಡಕಿಹಾಳ ಸಕ್ಕರೆ ಕಾರ್ಖಾನೆಯು ಹಿಂದೆಯೇ 3350 ರೂ. ಘೋಷಣೆ ಮಾಡಿತ್ತು. ಆದರೆ ಇದೀಗ ಮತ್ತೆ 50 ರೂ. ಹೆಚ್ಚಿಸಿ 3400 ರೂ. ಪ್ರತಿ ಬನ್ನಿಗೆ ಘೋಷಿಸಿದ್ದು ರೈತರಿಗೆ ಖುಷಿ ತಂದಿದೆ.
ಮಹಾರಾಷ್ಟ್ರದ ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ರೂ. 3500. 00 3618 ಘೋಷಿಸಿದ್ದರಿಂದ ಚಿಕ್ಕೋಡಿ-ನಿಪ್ಪಾಣಿ ಗಡಿಭಾಗದ ರೈತರು 10-15 ಕಿ.ಮೀ. ಅಂತರವಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲು ಪಾರಂಧಿಸಿದ್ದಾರೆ. ಅಧಿಕ ಇಳುವರಿಯ ಬೆಳಗಾವಿ ಜಿಲ್ಲೆಯ ಗಡಿಭಾಗದ ಕಬ್ಬು ಬೆಳೆ ಮೇಲೆ ಮಹಾರಾಷ್ಟ್ರದ ಕಾರ್ಖಾನೆಗಳು ದೃಷ್ಟಿ ಕೇಂದ್ರೀಕರಿಸಿವೆ. ಇಲ್ಲಿನ ರೈತರನ್ನು ಆಕರ್ಷಿಸಲು ಅಲ್ಲಿನ ಕಾರ್ಖಾನೆಗಳು ಕಂಡುಕೊಂಡ ಮಾರ್ಗ ಅಧಿಕ ದರ. ನಾನಾ ಸೌಲಭ್ಯಗಳ ಆಕರ್ಷಣೆ. ಪ್ರತಿ ಟನ್ನಿಗೆ 200 ರಿಂದ 300 ರೂ. ವ್ಯತ್ಯಾಸವಿರುವುದರಿಂದ ನಾವೇಕೆ ಪಾನಿ ಅನುಭವಿಸಬೇಕು. ನಮಗೆ ಹೆಚ್ಚಿಗೆ ದರ ಸಿಕ್ಕಲ್ಲಿ ನಾವು ನಮ್ಮ ಕಬ್ಬು ಕಳುಹಿಸುತ್ತಿದ್ದೇವೆ ಎನ್ನುತ್ತಿದ್ದಾರೆ ಕಬ್ಬು ಉತ್ಪಾದಕರು.
ಚಿಕ್ಕೋಡಿ-ನಿಪ್ಪಾಣಿ ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ತವಿದ್ದರೂ ಪ್ರಸಕ್ತ ಸಾಲಿನ ಭೀಕರ ಬರಗಾಲ ಬೆನ್ನಲ್ಲಿ ಪ್ರವಾಹದಿಂದಾಗೀಕೀಟ ಬಾಧೆ, ಹವಾಮಾನ ವೈಫಲ್ಯದಿಂದಾಗಿ ಶೇ. 20 ಕಬ್ಬು ನಾಶವಾಗಿದೆ. ಚಿಕ್ಕೋಡಿ-ನಿಪ್ಪಾಣಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 37,200 ಹೆಕ್ಟೇರ್ ಕಬ್ಬು ಬೆಳೆದಿದ್ದಾರೆ. ಕಬ್ಬು ಈ ಬಾರಿ ಕಡಿಮೆ ಉತ್ಪಾದನೆಯಾಗಿರುವುದರಿಂದ ಹಾಗೂ ಪ್ರತಿಯೊಂದು ಕಾರ್ಖಾನೆಗಳು ತನ್ನ ಕಬ್ಬು ನುರಿಯುವ ಸಾಮರ್ಥ್ಯ ಹೆಚ್ಚಿಸಿದ್ದರಿಂದ ಕಬ್ಬು ಒಯ್ಯಲು ಪೈಪೋಟಿ ನಡೆಸುತ್ತಿವೆ.
ಪ್ರತಿ ರೈತನಿಗೂ ತಾನು ಬೆಳೆದ ಕಬ್ಬನ್ನು ತನ್ನಿಚ್ಛೆಯಂತೆ ಅಧಿಕ ಬೆಲೆ ಘೋಷಿಸಿದ ಕಾರ್ಖಾನೆಗೆ ಸಾಗಿಸುವ ಅಧಿಕಾರವಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳು ಬೇರೆ ರಾಜ್ಯದ ಕಾರ್ಖಾನೆಗಳಿಗಿಂತ ಅಧಿಕ ಬೆಲೆ ನೀಡಬೇಕಿತ್ತು. ಇಂದು ರಸಗೊಬ್ಬರ ಬೆಲೆ ಏರಿಕೆ. ಕೃಷಿ ಕೂಲಿಕಾರರ ಸಂಬಳ ಹೆಚ್ಚಳ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಸರಾಸರಿ ಪ್ರತಿ ಟನ್ನಿಗೆ ಕನಿಷ್ಠ 3500 ರೂ. ರಾಜ್ಯದ ಕಾರ್ಖಾನೆಗಳು ನೀಡಬೇಕಿತ್ತು ಎಂಬುದು ರೈತರು. ಪ್ರಜ್ಞಾವಂತರ ಅಭಿಪ್ರಾಯ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 