ಕಬ್ಬಿನ ಟ್ರಾಕ್ಟರ್ ಅಪಘಾತ :ಬೈಕ್ ಸವಾರ ಸಾವು
ಲೋಕದರ್ಶನ ವರದಿ
ಹೂವಿನಹಡಗಲಿ 05 : ಕಬ್ಬಿನ ಟ್ರಾಕ್ಟರ್,ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಿರೇಹಡಗಲಿಯಲ್ಲಿ ಶುಕ್ರವಾರ ಸಂಭವಿಸಿದೆ.
ಮೃತ ವ್ಯಕ್ತಿ ಹಿರೇಹಡಗಲಿ ಹನುಮಂತಪ್ಪ ಕಾಲಿಬಾವಿ (53),ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ನಿಗಮದಲ್ಲಿ ಗುತ್ತಿಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನ, ಇಬ್ಬರು ಪುತ್ರರಿದ್ದಾರೆ. ಈ ಬಗ್ಗೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.