ಕಬ್ಬು ಕಟಾವು ಕಾರ್ಮಿಕರು ಮರಳಿ ಗೂಡಿಗೆ
ಲೋಕದರ್ಶನ ವರದಿ
ಮಾಂಜರಿ 23: 2022-23 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಗಡಿಭಾಗದ ಸಕ್ಕರೆ ಕಾರಖಾನೆಗಳು ಮುಕ್ತಾಯ ಹಂತ ತಲುಪಿದ್ದು, ಕಳೆದ 4-5 ದಿನಗಳಿಂದ ಮಹಾದಿಂದ ಬಂದ ಕಬ್ಬು ಕಟಾವು ಕಾರ್ಮಿಕರು ತಮ್ಮ ಬಿಡಾರದೊಂದಿಗೆ ಮರಳಿ ಗೂಡು ಸೇರುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ 2 ಸಕ್ಕರೆ ಕಾರಖಾನೆಗಳು ತನ್ನ ಹಂಗಾಮು ಮುಕ್ತಾಯ ಗೊಳಿಸಿದ್ದು, ಇನ್ನು ಕೆಲವು ಗಡಿಭಾಗದ ಸಕ್ಕರೆ ಕಾರಖಾನೆಗಳು ಇದೆ ತಿಂಗಳ ಕೋನೆಯವಾರದಲ್ಲಿ ಹಂಗಾಮು ಪುರ್ಣಗೊಳಿಸಲಿದ್ದಾರೆ. ಜೀವನದ ಹೊಟ್ಟೆ ಹೊರೆಯಲು ಕಳೆದ ಐದು ತಿಂಗಳ ಹಿಂದೆ ಆಗಮಿಸಿದ ಮಹಾರಾಷ್ಟ್ರದ ಬೀಡ, ಉಸ್ಮಾನಾಬಾದ, ಜತ್, ಪಂಡರಪೂರ, ವಿಜಾಪೂರ ಜಿಲ್ಲೆಯ ಕಬ್ಬು ಕಟಾವು ಕಾರ್ಮಿಕರು ತಮ್ಮ ಮಕ್ಕಳು-ಮರಿ, ಸರಕು ಸರಾಮಜಾಮನೊಂದಿಗೆ ತಮ್ಮೂರತ್ತ ವಾಹನಗಳ ಮೂಲಕ ತೆರಳುತ್ತಿದ್ದಾರೆ.
ಇಂದಲ್ಲ ನಾಳೆ ತಮಗೂ ಒಳ್ಳೆಯ ದಿನಗಳು ಬರಬಹುದು ಎಂಬ ಕನಸು ಹೊತ್ತು ಅಕ್ಟೋಬರ ನಿಂದ ಫೇಬ್ರುವರಿ ವರೆಗೆ ಶ್ರಮಿಸುವ ಕೂಲಿಕಾರರು ಕಾರ್ಖಾನೆಯ ಚಕ್ರ ನಿಲ್ಲುತ್ತಿದ್ದಂತೆ ಸಂಸಾರ ಸಮೇತ ತಮ್ಮೂರಿನತ್ತ ಸಾಗುತ್ತಿದ್ದಾರೆ