ನಾಡಿನ ಸಂಸ್ಕೃತಿ ಮತ್ತು ಕಲೆ ಉಳಿಸುವಲ್ಲಿ ಇಂತಹ ಸ್ಪರ್ಧೆ ಸಹಕಾರಿ: ಭಟ್ಟ ಪ್ರಸಾದ್
ಕಂಪ್ಲಿ ಸೆ31: ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಇಂತಹ ಸ್ಪರ್ಧೆ ಸಹಕಾರಿಯಾಗಿದೆ ಎಂದು ಚಿ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.
ಪಟ್ಟಣದ 21ನೇ ವಾರ್ಡಿನ ಸಕ್ಕರೆ ಕಾರ್ಖಾನೆಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಿನಾಯಕ ಮಹಾ ಮಂಡಳಿಯಿಂದ ಗಣಪತಿ ಹಬ್ಬದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಸಹಕಾರಿಯಾಗಿದೆ. ರಂಗೋಲಿ ಕಲೆಯನ್ನು ಇಂದಿನ ಮಕ್ಕಳು ಹಾಗೂ ಯುವ ಜನತೆಗೆ ಪರಿಚಯಿಸಲು ಈ ಸ್ಪರ್ಧೆ ಅನುಕೂಲವಾಗಿದೆ. ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ತಾಲೂಕು ಅಧ್ಯಕ್ಷ ಪಿ.ವಿರೇಶ ಇವರು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಕವಿತಾ(ಪ್ರಥಮ), ಸುನೀತಾ (ದ್ವಿತೀಯ), ರೇಷ್ಮಾ (ತೃತೀಯ) ಬಹುಮಾನ ಮತ್ತು ಪಾಲ್ಗೊಂಡ ಮಹಿಳೆಯರಿಗೆ ಸಮಾಧಾನಕರ ಬಹುಮಾನ ನೀಡಿದ್ದು, ಇದರಿಂದ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಜಿಲ್ಲಾ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್ ಬಾಷಾ, ಹೇಮಾವತಿ ಪೂರ್ಣಚಂದ್ರ, ಮುಖಂಡರಾದ ಡಿ.ಮೌನೇಶ, ಶಾಂತಿಲಾಲ್ ಸೇರಿದಂತೆ ಮಹಿಳೆಯರು, ವಿನಾಯಕ ಮಹಾ ಮಂಡಳಿಯವರು ಪಾಲ್ಗೊಂಡಿದ್ದರು.