ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ವಿಕ್ಷೇಣೆ
ಜಮಖಂಡಿ : 19 ನಗರದ ಐತಿಹಾಸಿಕ ಪೋಲೋ ಮೈದಾನ ಹತ್ತಿರ ಸಾರ್ವಜನಿಕರಿಗೆ ಅನುಕೂಲತೆಗಾಗಿ ಸಾರ್ವಜನಿಕ ಸುಲಭ ಶೌಚಾಲಯನ್ನು ನಿರ್ಮಿಸಲಾಗಿದ್ದ ನೂತನ ಕಟ್ಟಡವನ್ನು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಬೆಳಗಿನ ಜಾವದಲ್ಲಿ ಅಧಿಕಾರಿಗಳೊಂದಿಗೆ ವಿಕ್ಷೇಣೆ ನಡೆಸಿದರು.
ನಂತರ ಮಾತನಾಡಿದ ಅವರು, ಪೋಲೋ ಮೈದಾನ ಪಕ್ಕದಲ್ಲಿ ಸಾಕಷ್ಟು ಅಂಗಡಿ-ಮುಂಗಟ್ಟುಗಳು ಇದ್ದು. ವ್ಯಾಪಾರ ವಹಿವಾಟಕ್ಕಾಗಿ ಬಂದ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲತೆಗಾಗಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದ್ದು. ಅದರ ನೀರು ಹೊರ ಹೋಗಲು ಡ್ರೇನೆಜ್ಗೆ ಪೈಪಲೈನ್ ಅಳವಡಿಸಿ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್,ಆರ್, ಬಂಡಿವಡ್ಡರ ಅವರು ಮಾತನಾಡಿ, ತಳಪಾಯದಲ್ಲಿ ಶೌಚಾಲಯದ ನೀರು ಹೊರ ಹೋಗಲು ಅದಕ್ಕೆ ಒಂದು ಪೈಪಲೈನ್ ಅಳವಡಿಸಬೇಕಾಗುತ್ತದೆ. ಅದನ್ನು ಹಾಕಬೇಕಾದರೆ ನಗರಸಭೆಯ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ಡ್ರೇನೆಜ್ಗೆ ಅಳವಡಿಸಲಾಗುವುದು. ಮುಂದೆ ಪುಟ್ಟಪಾತ್ ಇರುವ ಕಾರಣ ಡ್ರೇನೆಜ್ ಕೆಳಗೆ ಭಾಗದಲ್ಲಿ ಇರುತ್ತದೆ. ಅದಕ್ಕೆ ಅಳವಡಿಸಿ ಶೌಚಾಲಯ ಕಟ್ಟಡವನ್ನು ಕಟ್ಟಲಾಗುವುದು ಎಂದು ಎಸಿ, ಶ್ವೇತಾ ಬೀಡಿಕರ್ ಅವರಿಗೆ ತಿಳಿಸಿದರು.
ಎಸಿ,ಶ್ವೇತಾ ಬೀಡಿಕರ್ ಮಾತನಾಡಿ, ನಗರಸಭೆ ಪೌರಾಯುಕ್ತರಿಗೆ ಶೌಚಾಲಯದ ಪೈಪಲೈನ್ ಬಗ್ಗೆ ಆದೇಶ ನೀಡುತ್ತೇನೆ. ಆದಷ್ಟು ಬೇಗನೆ ಕಟ್ಟಡದ ಕೆಲಸವನ್ನು ಪ್ರಾರಂಭಿಸಿ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್,ಆರ್, ಬಂಡಿವಡ್ಡರ ಅವರಿಗೆ ಸೂಚನೆ ನೀಡಿದರು.