ಹುಲ್ಯಾಳ ವಲಯಮಟ್ಟದ ಪ್ರತಿಭಾ ಕಾರಂಜಿ
ಜಮಖಂಡಿ 13: ಹುಲ್ಯಾಳ ವಲಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹುಲ್ಯಾಳದ, ತುಂಗಳ ಕನ್ನಡ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ತಮ್ಮ ವಿಶೇಷ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದರು.
ನಗರದ ಹೊರವಲಯದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಯನಗರದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಗಳಲ್ಲಿ ದೇಶಭಕ್ತಿ ಗೀತೆಯಲ್ಲಿ ಪ್ರತಿಭಾ ಆರ್,ಎಮ್, ಹಿಂದಿ ಕಂಠಪಾಠದಲ್ಲಿ ಶ್ರೀಲಕ್ಷ್ಮೀ ಗಡೇದ, ಸಂಸ್ಕೃತ ಕಂಠಪಾಠದಲ್ಲಿ ಶ್ರೀನಿವಾಸ ಶಿಂಧೆ, ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಖುಷಿ ರಾಘಾ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಣುಷಾ ಹಿರಡ್ಡಿ, ಅಭಿನಯ ಗೀತೆಯಲ್ಲಿ ಸುಶ್ಮಿತಾ ಅವಟಿ, ಪದ್ಯ ವಾಚನದಲ್ಲಿ ಸೌಮ್ಯ ಬಾವಿ, ಚಿತ್ರಕಲೆಯಲ್ಲಿ ಸುಚಿತ್ರಾ ಕೋರನ್ನವರ ಪ್ರಥಮ ಸ್ಥಾನವನ್ನು ಪಡೆದು ಜಯಭೇರಿ ಬಾರಿಸಿದರು.
ಪ್ರೌಢಶಾಲಾ ವಿಭಾಗದಿಂದ ಕನ್ನಡ ಭಾಷಣದಲ್ಲಿ ವಿನಯಶ್ರೀ ಮಾಳಿ, ಇಂಗ್ಲಿಷ ಭಾಷಣದಲ್ಲಿ ಅಪೇಕ್ಷಾ ಚೌಗಲಾ, ಹಿಂದಿ ಭಾಷಣದಲ್ಲಿ ಶ್ರಾವಣಿ ಕುಲಕರ್ಣಿ, ಸಂಸ್ಕೃತ ಭಾಷಣದಲ್ಲಿ ಸಮನಾ ಮುಜುಮದಾರ,ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಮೇಧಾ ಮುದ್ನೂರ, ಧಾರ್ಮಿಕ ಪಠಣ ಅರೇಬಿಕದಲ್ಲಿ ರಾಹೀನ ಸಾಗರ, ಭರತನಾಟ್ಯ ಸ್ಪರ್ಧೆಯಲ್ಲಿ ಅಂಕಿತಾ ತೇಲಿ, ಪ್ರಬಂಧ ರಚನೆಯಲ್ಲಿ ಶ್ರೇಯಾ ಕುಮಟಗಿ, ಮಿಮಿಕ್ರಿಯಲ್ಲಿ ಅಭಿನವ ಮೊಕಾಶಿ, ಗುಂಪು ವಿಭಾಗ ಸ್ಪರ್ಧೆಗಳಲ್ಲಿ ಜಾನಪದ ನೃತ್ಯದಲ್ಲಿ ರುಚಿ ಸಬರದ ಹಾಗೂ ಸಂಗಡಿಗರು ಕ್ವಿಜ್ ಸ್ಪರ್ಧೆಯಲ್ಲಿ ಸಾಬು ಕರ್ಜಗಿ ಮತ್ತು ಚೇತನ ಗುಂಜಣ್ಣವರ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗ ಕನ್ನಡ ಕಂಠಪಾಠದಲ್ಲಿ ನಿಕಿತಾ ಬಿರಾದಾರ ಹಾಗೂ ಅನನ್ಯ ಬಿರಾದಾರ, ಇಂಗ್ಲಿಷ ಕಂಠಪಾಠದಲ್ಲಿ ರಿದಾ ಶಾಬಾದಿ ,ಸಂಸ್ಕೃತ ಕಂಠಪಾಠದಲ್ಲಿ ಖುಷಿ ಮುರಗೋಡ, ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಸ್ತವ್ಯ ಹುಬ್ಬಳ್ಳಿ, ಕಥೆ ಹೇಳುವುದು ಪೂರ್ಣಪ್ರಜ್ಞ ಕುಲಕರ್ಣಿ, ಭಕ್ತಿ ಗೀತೆಯಲ್ಲಿ ಆರಾಧ್ಯ ಜೀರಗಾಳ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಪ್ರೌಢ ವಿಭಾಗದಿಂದ ಭಾವಗೀತೆ ಸಮನಾ ಮುಜುಮದಾರ,ಪ್ರಬಂಧ ರಚನೆ ಸ್ಪೂರ್ತಿ ಬಡಿಗೇರ, ಚರ್ಚಾ ಸ್ಪರ್ಧೆ ಸಮರ್ಥ ಬಿರಾದಾರ, ಆಶುಭಾಷಣ ಹರಿದೃತಾ ತಟಗಾರ, ಗುಂಪು ವಿಭಾಗದಲ್ಲಿ ಕ್ವಿಜ್ ಸ್ಪರ್ಧೆಯಲ್ಲಿ ದಿಮಹಿ ಶಾಸ್ತ್ರಿ ಮತ್ತು ಶ್ರಾವಣಿ ಶಿರೂರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ ಕಂಠಪಾಠ ಇಂಗ್ಲಿಷ ಪ್ರೀತಿ ಹುಡೇದಮನಿ, ಆಶುಭಾಷಣ ಸ್ಮೃತಿ ಪಾಟೀಲ, ಭಕ್ತಿ ಗೀತೆ ಸಿಂಚನಾ ಕಾಂಬಳೆ, ಧಾರ್ಮಿಕ ಪಠಣ ಫಾತಿಮಾ ಹಿಪ್ಪರಗಿ, ಜಾನಪದ ಗೀತೆ ಶೃತಿ ಪಾಟೀಲ, ಭಾವಗೀತೆ ನವ್ಯಾ ಬಡಿಗೇರ, ರಂಗೋಲಿ ಭುವನೇಶ್ವರಿ ಇಟ್ಟಿ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಡಿ,ಜಿ, ವಾಲಿ ಹಾಗೂ ಸಹ ಮುಖ್ಯ ಗುರುಗಳಾದ ಶಿವಕುಮಾರ ಕಾಟಾಪುರಮಠ ತಿಳಿಸಿದರು. ಪ್ರಶಸ್ತಿ ವಿಜೇತ ಮಕ್ಕಳನ್ನು ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕರು ಮಕ್ಕಳಿಗೆ ಶುಭವನ್ನು ಹಾರೈಸಿದರು.