ಬ್ಯಾಡ್ಗಿ

ಭಗತ್ ಸಿಂಗ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು: ಮಂಜುನಾಥ

ಭಗತ್ ಸಿಂಗ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು: ಮಂಜುನಾಥ

ಬ್ಯಾಡಗಿ  28:  ಭಗತ್ ಸಿಂಗ್ ಅಪ್ರತಿಮ ದೇಶಭಕ್ತ ಹಾಗೂ ದೇಶಪ್ರೇಮಿ ಬಹಳಷ್ಟು ಮನಸ್ಸಗಳನ್ನು ಗೆದ್ದು ಸ್ಪೂರ್ತಿಯತ್ತ ಕೊಂಡೂಯ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನೆಂದು ಬಾಲವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.ಶುಕ್ರವಾರ ಪಟ್ಟಣದ ಕ್ರೀಡಾಂಗಣದಲ್ಲಿ ಭಗತ್ ಸಿಂಗ್ ಸೇವಾ ಸಂಸ್ಥೆ ಏರಿ​‍್ಡಸಿದ್ದ ಭಗತ್ ಸಿಂಗ್ ಅವರ 117 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಮನದಲಿ ಭಗತ್ ಸಿಂಗ್ ಇಂದಿಗೂ ಅಮರ. ಬ್ರಿಟಿಷರ ನೇಣಿಗೆ ನಗುನಗುತ್ತಲೆ ಕೊರಳೊಡ್ಡಿದ ಭಾರತದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ ಎಂದರೆ ಭಗತ್ ಸಿಂಗ್‌. ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟೀಷರು ನಡೆಸಿದ ಮಾರಣ ಹೋಮದಿಂದುಂಟಾದ ರಕ್ತದ ಕೆಂಪು ಕಲೆ, ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿತ್ತೆಂದರು.  

ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.ಯುವವಾಗ್ಮಿ ಅಮೋಘ ಭಾರತ ಮಾತನಾಡಿ ಭಗತ್ ಸಿಂಗ್ ತನ್ನ ಮನೆಯ ಜಮೀನಿನಲ್ಲಿ ಬೆಳೆ ಬೆಳೆಯುವ ಬದಲು ಬ್ರಿಟಿಷರ ವಿರುದ್ಧ ಹೋರಾಡಲು ಬಂದೂಕು, ಶಸ್ತ್ರಗಳ ಬೆಳೆ ಬೆಳೆ ಯುತ್ತೇನೆಂದು ಹೇಳಿದ ದೈರ್ಯಶಾಲಿ ಬಾಲಕನಾಗಿದ್ದ, ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ ಸ್ವಾತಂತ್ರ್ಯ.ಅದೊಂದೇ ನನ್ನ ಕನಸ್ಸು ಎಂದು ಭಗತ್ ಸಿಂಗ್ ಹೇಳುತ್ತಿದ್ದರೆಂದರು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಭಾರತದ ಸ್ವಾತಂತ್ರ್ಯದ ಕಾರಣಕ್ಕಾಗಿ ಅವರ ತ್ಯಾಗ ಮತ್ತು ಅಚಲವಾದ ಸಮರೆ​‍್ಣ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ. 

 ಧೈರ್ಯದ ಬೆಳಕಾಗಿರುವ ಅವರು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ನಿರಂತರ ಹೋರಾಟದ ಸಂಕೇತವಾಗಿ ಶಾಶ್ವತವಾಗಿ ಜನಮನದಲ್ಲಿ ಉಳಿದಿದ್ದಾರೆಂದರು. ಪ್ರಾಸ್ತಾವಿಕವಾಗಿ ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಯೋಗಿ ಶಿರೂರ,  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಸವರಾಜ ಛತ್ರದ. ಹಾವೇರಿ ನಗರ ಸಭಾ  ಸದಸ್ಯ ಲಿಂಗರಾಜ ಶಿವಣ್ಣನವರ, ಶಿವಬಸಪ್ಪ ಕುಳೇನೂರ,ಮುಖ್ಯಾಧಿಕಾರಿ ವಿನಯಕುಮಾರ್ ಹೊಳೆಪ್ಪಗೋಳ,  ನ್ಯಾಯವಾದಿ ಸಂಘದ ಅಧ್ಯಕ್ಷ  ಶಂಕರ ಬಾರ್ಕಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ, ನ್ಯಾಯವಾದಿ ಪ್ರಕಾಶ್ ಬನ್ನಿಹಟ್ಟಿ, ವಿಷ್ಣುಕಾಂತ ಬೆನ್ನೂರ, ಪರಶುರಾಮ ಉಜನಿಕೊಪ್ಪ, ದುರ್ಗೇಶ ಗೊಣೆಮ್ಮನವರ, ನಾಗರಾಜ ಹಾವನೂರ, ಸೇರಿದಂತೆ ಇನ್ನಿತರರಿದ್ದರು, 


ಸುದ್ದಿ ಓದಿ