ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು: ಲವಕುಮಾರ್
ಶಿಂದಿಕುರಬೇಟ 08: ಇಂದು ನಮ್ಮ ಪ್ರೌಢಶಾಲೆಯಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸೆಸ್ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಲವಕುಮಾರ್ ವಿದ್ಯಾರ್ಥಿಗಳು ಓದುವುದರೊಂದಿಗೆ ಸಂಪೂರ್ಣವಾಗಿ ಅಧ್ಯಯನಶೀಲರಾಗಬೇಕು ಅಂದಾಗ ನಾವು ಸಾಧಕರಾಗುತ್ತೇವೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯರಾದ. ಪಿ ಎಚ್ ಗೋಸಬಾಳ ವಿದ್ಯಾರ್ಥಿಗಳು ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ತಾಲುಕಾ ಯೋಜನಾಧಿಕಾರಿಗಳಾದ ಮಮತಾ ನಾಯ್ಕ್ ಮಾಧ್ಯಮಿಕ ಶಾಲೆಯ ಎಸ್ ಡಿ ಸಿ ಎಂ ಸಿ ಅಧ್ಯಕ್ಷರಾದ ಜ್ಯೋತೆಪ್ಪ ಬಂತಿ, ಶಿಕ್ಷಕರಾದ ಎಂ ಎಸ್ ಬೆಳಗಲಿ ಮೇಲ್ವಿಚಾರಕರಾದ ಕವಿತಾ ಮೇಡಂ, ಸೇವಾ ಪ್ರತಿನಿಧಿಯಾದ ರೂಪಶ್ರೀ ಮೇಡಂ, ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪಿ ಎಲ್ ಮಲ್ಲಾಪುರ್ ನಿರೂಪಿಸಿದರು ಪಾಟೀಲ್ ಮೇಡಂ ವಂದಿಸಿದರು.