ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಯರಗಟ್ಟಿ 14: ಸಮಿಪದ ಹಿರೇಬೂದರನೂರ ಗ್ರಾಮ ಪಂಚಾಯತಿಯ ಚಿಕ್ಕಬೂದನೂರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಒಂದು ವರ್ಷಗಳ ಹಿಂದೆ ಹಿರೇಬೂದನುರ, ಚಿಕ್ಕಬೂದನಬೂರ ಗ್ರಾಮ ಪಂಚಾಯತಿ ಮಾರ್ಗವಾಗಿ ಪಟ್ಟಣಕ್ಕೆ ಬರಲು ಬಸ್ ಸೌಕರ್ಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ಸೌಕರ್ಯವಿಲ್ಲದೆ ಶಾಲಾ, ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಿಂದ ಮುಖ್ಯರಸ್ತೆಗೆ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮುಖ್ಯರಸ್ತೆಗೆ ತಲುಪಿದ ನಂತರ ಬಸ್ಸಿಗಾಗಿ ಗಂಟೆಗಟ್ಟಲೆ ಕಾದರೂ ಬಸ್ ಸೌಕರ್ಯ ಇಲ್ಲವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿನಿತ್ಯ ಪಟ್ಟಣದ ಶಾಲಾ, ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯನ್ನು ಹಲವು ಬಾರಿ ಗಮನಕ್ಕೆ ತಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಧರಣಿಯಲ್ಲಿ ವಿದ್ಯಾರ್ಥಿಗಳಾದ ಸಾವಿತ್ರಿ ಪಿಡ್ಡೆನ್ನವರ, ಸವಿತಾ ಸೂರನ್ನವರ, ಲಕ್ಷ್ಮೀ ಪಿಡ್ಡೆನ್ನವರ, ಮಹಾದೇವಿ ಗೊಡಚಿ, ಶೃತಿ ಮಲ್ಲಾಡಿ, ಬಸವ್ವ ತಳವಾರ, ಬಸವರಾಜ ತಳವಾರ, ಪ್ರಜ್ವಲ ಸಂಕನಾಳ, ಆಕಾಶ ಮಲ್ಲಾಡಿ, ಪ್ರಕಾಶ ಪಿಡ್ಡೆನ್ನವರ, ಸಿದ್ದಪ್ಪ ಪಿಡ್ಡೆನ್ನವರ, ಮುತ್ತಪ್ಪ ಸೂರಣ್ಣವರ, ಗಂಗಪ್ಪ ಸೂರನ್ನವರ ಮತ್ತಿರರರು ಇದ್ದರು.
ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ ಉಪಾಧ್ಯಕ್ಷ ಶಿವರಾಜ ರುದ್ರ್ಪನ್ನವರ ಮಾತನಾಡಿ,
ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಬಸ್ಗಳು ನೀಡುವಂತೆ ಗ್ರಾಮ ಪಂಚಾಯತಿಯಿಂದ ಪತ್ರದ ಮೂಖೆನ ಮನವಿ ಸಲ್ಲಿಸಿದೆ. ಅಧಿಕಾರಗಳು ಹೆಚ್ಚುವರಿ ಬಸ್ ಇಲ್ಲದಿರುವುದರಿಂದ ಬಸ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.