ಕಾರವಾರ

ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ
Students of Balamandira High School secured first place in the district-level departmental sports me

ಲೋಕದರ್ಶನ ವರದಿ 

ಕಾರವಾರ 09: ಎಜ್ಯುಕೇಷನ್ ಸೊಸೈಟಿಯ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಸಾರ್ವಜನಿಕ ಸಾಕ್ಷರತಾ ಇಲಾಖೆಯಿಂದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳಿಗೆ ಅಂಕೋಲಾ ಜೈಹಿಂದ್ ಪ್ರೌಢಶಾಲೆಯಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆ ವಿದ್ಯಾರ್ಥಿ ಕು. ಅನ್ವಿತ ಆರ್‌. ಪ್ರಭು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ 17 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳಿಗೆ ಬೀನಾವೈದ್ಯ ಪ್ರೌಢಶಾಲೆ ಮುರ್ಡೇಶ್ವರದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆ ವಿದ್ಯಾರ್ಥಿ ಕು. ಅಶಿಸ್ ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  

ಶಾಲಾ ಶಿಕ್ಷಣ ಇಲಾಖೆ ಉತ್ತರ ಕನ್ನಡ ಮತ್ತು ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆ ಶೆಟಗೇರಿ ಅಂಕೋಲಾ ಇಲ್ಲಿ ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದ ಗುಂಪು ಆಟದಲ್ಲಿ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕು. ಹರ್ಷಿದಾ ಎಮ್‌. ಗೌಡ, ಕು. ಅನ್ವಿತಾ ಜಿ. ಕೊಪಡೆ, ಕು. ಅವನಿ ಜಿ. ಕೊಪಡೆ, ಕು. ಮೆದಿನಿ ಡಿ. ಪಟ್ಗಾರ, ಕು. ಕೀರ್ತಿ ಸಿ. ಪನಿಗಟ್ಟಿ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  

ಇವರ ಈ ಸಾಧನೆಗೆ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಅಂಜಲಿ ಮಾನೆ, ಕಾರವಾರ ಎಜ್ಯಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಸ್‌.ಪಿ. ಕಾಮತ್, ಉಪಾಧ್ಯಕ್ಷರಾದ ಶ್ರೀ ಅನಿರುದ್ಧ ಹಳದಿಪುರಕರ, ಕಾರ್ಯದರ್ಶಿ ಶ್ರೀ ಆರ್‌. ಎಸ್‌. ಹಬ್ಬು, ಹೆಚ್ಚುವರಿ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ ಶ್ರೀ ಜಿ.ಪಿ. ಕಾಮತ ಹಾಗೂ ಆಡಳಿತಮಂಡಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಮತ್ತು ಪಾಲಕರು ಶುಭ ಕೋರಿರುತ್ತಾರೆ. 


ಸುದ್ದಿ ಓದಿ