ಕಾರವಾರ

ವಿದ್ಯಾರ್ಥಿಗಳು ರೋಗಿಗಳ ಶ್ರುಶೂಷೆ ಮಾಡುವ ಮೂಲಕ ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು - ಮಾಜಿ ಸಚಿವ ಪ್ರಭಾಕರ ರಾಣೆ

ವಿದ್ಯಾರ್ಥಿಗಳು ರೋಗಿಗಳ ಶ್ರುಶೂಷೆ ಮಾಡುವ ಮೂಲಕ ವೃತ್ತಿಪರತೆ  ಮೈಗೂಡಿಸಿಕೊಳ್ಳಬೇಕು - ಮಾಜಿ ಸಚಿವ ಪ್ರಭಾಕರ ರಾಣೆ

ಕಾರವಾರ : ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ನಸಿಂರ್ಗ್ ವಿದ್ಯಾರ್ಥಿಗಳು ರೋಗಿಗಳ ಶ್ರುಶೂಷೆ ಮಾಡುವ ಮೂಲಕ ವೃತ್ತಿಪರತೆ  ಮೈಗೂಡಿಸಿಕೊಳ್ಳಬೇಕೆಂದು ಮಾಜಿ ಸಚಿವ,  ಬಿಜಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಪ್ರಭಾಕರ ರಾಣೆ ಅಭಿಪ್ರಾಯಪಟ್ಟರು.   

ಸುಮತಿ ನಾಯಕ ನಸಿಂರ್ಗ್ ಕಾಲೇಜು ವತಿಯಿಂದ  ಮಂಗಳವಾರ ಕಾಲೇಜು ಸಭಾಭಾವನದಲ್ಲಿ ಜರುಗಿದ ದೀಪ್ರ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ನಸಿಂರ್ಗ್ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.  

ಮುಖ್ಯ ಅತಿಥಿಯಾಗಿದ್ದ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯ  ನಸಿಂರ್ಗ್ ಸುಪ್ರಿಡೆಂಟ್  ಲಕ್ಷ್ಮೀ ಭಟ್ ಮಾತನಾಡಿ, ಕಳೆದ 20 ವರ್ಷದ ಹಿಂದೆ ಆರಂಭಿಸಿದ ಸಂಸ್ಥೆಯ ನಸಿಂರ್ಗ್ ಇನ್ಸಿಟ್ಯುಟ್ ಸಾವಿರಾರು ವಿದ್ಯಾರ್ಥಿಗಳು ಕಲಿತುಹೋಗಿದ್ದಾರೆ. ನಸಿಂರ್ಗ್ ಪ್ರೊಪೇಶನ್ ನೊಬೆಲ್ ಪ್ರೊಪೇಶನ್ ಆಗಿದ್ದು, ವಿದ್ಯಾರ್ಥಿಗಳು   

ಬಿಎಸ್ಸಿ ನಸಿಂರ್ಗ್,  ಎಂಎಸ್ಸಿ ನಸಿಂರ್ಗ್ ಮತ್ತು  ಪಿಎಚ್ ಡಿ ಮಾಡಬೇಕು. ಮೊದಲಿರುವ ನಸಿಂರ್ಗ್ ಗಿಂತ ಈಗ ನಸಿಂರ್ಗ್  ವಿಭಿನ್ನವಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಕೇವಲ ನಸಿಂರ್ಗ್ ವಿದ್ಯಾರ್ಥಿಗಳು ಶಿಕ್ಷಣ ಪಡೆದು  ವೈದ್ಯರಿಗೆ ಸಹಾಯಕರಾಗಿರೋದಲ್ಲ.   ಸಮಾಜಕ್ಕೆ ನಿಮ್ಮಿಂದ ಉತ್ತಮ ಸೇವೆ ಸಿಗುವ ಹಾಗೆ ಆಗಬೇಕೆಂದು ಹೇಳಿದರು.  

ಸಂಸ್ಥೆಯ  ಸದಸ್ಯರಾದ ಉಲ್ಲಾಸ ನಾಯ್ಕ ಮಾತನಾಡಿ, ಕಳೆದ 40 ವರ್ಷಗಳಿಂದ ಪ್ರಭಾಕರ ರಾಣೆ ಅವರು ನಗರದ ಮಕ್ಕಳನ್ನ ಕೇಂದ್ರಿಕರಿಸದೇ,  ಹಳ್ಳಿಗಳ ಮಕ್ಕಳಿಗೆ ಶಕ್ತಿ ಬರಬೇಕಾದರೇ, ಶಿಕ್ಷಣ ಸಿಗಬೇಕೆಂಬ ಹಂಬಲಿದಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಮಾಡಿದರು. ರಾಣೆ ಅವರು ಹಳ್ಳಿಗಳ ಜನರ ಬಗ್ಗೆ ಕಳಕಳಿ ಹೊಂದಿದವರು. ಗ್ರಾಮೀಣ ಜನರ ಆರೋಗ್ಯ ವಿಚಾರ ಮಾಡಿ 20 ವರ್ಷದ ಹಿಂದೆ  ನಸಿಂರ್ಗ್ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ರಾಣೆಯವರ ಕನಸು ಸಾರ್ಥಕವಾಗಿದೆ ಎಂದರು.  ನರ್ಸ್‌ ಗಳಿಗೆ ತಾಳ್ಮೆ ಇರಬೇಕು. ರೋಗಿಗಳ ಶುಶ್ರೂಸೆ ವೈದ್ಯರಿಗಿಂತ ಮೊದಲು ನರ್ಸಿಗಳೆ   ನೋಡಬೇಕು. ರೋಗಿ ಗುಣಮುಖರಾದರೆ ಅವರ ಆಶೀರ್ವಾದ ನಿಮಗಿರುತ್ತದೆ. ಈಗಾಗಲೇ ದೇಶ ವಿದೇಶಗಳಲ್ಲಿ ಹಲವಾರು ಜನರು ವೃತ್ತಿ ನಡೆಸುತ್ತಿದ್ದಾರೆ. ನೀವೆಲ್ಲರೂ  ಸಂಸ್ಥೆಯ ಹೆಸರು ತನ್ನಿ ಎಂದು ಕರೆ ನೀಡಿದರು.  

ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಪವಾರ ಮಾತನಾಡಿ, ದಾನಗಳೆಂದರೆ ಸೇವೆ ಮಾಡುವುದು. ಸಮಾಜದ ನಸಿಂರ್ಗ್ ವಿದ್ಯಾರ್ಥಿಗಳ  ಸೇವೆ ಸ್ಮರಿಸುವಂತಾಗಬೇಕು. ನಸಿಂರ್ಗ್ ವೃತ್ತಿ ಅಂದರೆ ನೋಬೆಲ್ ವೃತ್ತಿಯಾಗಿದೆ.  ರಾಜಕೀಯದಲ್ಲಿ ಬಹಳ ಜನ ಆಗಿ ಹೋಗಿದ್ದಾರೆ. ಪ್ರಭಾಕರ ರಾಣೆ ಅವರು ಸೇವಾ ಮನೋಭಾವನೆಯಿಂದಾಗಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ವೈದ್ಯರು ಮತ್ತು ನಸಿಂರ್ಗ್ ಸೇವೆ ಮಾಡುವವರು ಎಂದಿಗೂ ನಿವೃತ್ತರಾಗುವುದಿಲ್ಲ ಎಂದರು.  

ಕಾರ್ಯಕ್ರಮದಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕಿಶೋರ್ ರಾಣೆ, ವನಿತಾ ಪಿ ರಾಣೆ, ಪಾಂಡುರಂಗ ನಾಯ್ಕ, ಪ್ರಮೋದ ರಾಣೆ, ಶ್ರೀಕಾಂತ ಸೈಲ್ ಉಪಸ್ಥಿತರಿದ್ದರು.  ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು.  ನಸಿಂರ್ಗ್ ಕಾಲೇಜು ಪ್ರಾಂಶುಪಾಲರಾದ ಸ್ವಪ್ನಾ ಗುನಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ದೀಪಾ ನಾಯ್ಕ ಸ್ವಾಗತಿಸಿದರು.  

ಜಾನಕಿ ರಾಣೆ ವಂದಿಸಿದರು. ಮಹಾಲಕ್ಷ್ಮೀ ಪಟಗಾರ ನಿರೂಪಿಸಿದರು. 


ಸುದ್ದಿ ಓದಿ