ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಕೌಶಲ್ಯ ಅಗತ್ಯ
ರಾಣೇಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಅಭಿಪ್ರಾಯ: ಉದ್ಯೋಗ ಮೇಳ
ರಾಣೆಬೆನ್ನೂರು 04: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕಾಗಿ ಕೇವಲ ಸಾಮಾನ್ಯ ಶಿಕ್ಷಣವಷ್ಟೇ ಸಾಲದು. ಅದರೊಂದಿಗೆ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಯಬೇಕು. ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಆ ಕಂಪನಿಯ ಅಗತ್ಯತೆಗನುಗುಣವಾಗಿ ಕೌಶಲ್ಯಗಳನ್ನು ರೂಢಿಸಿಕೊಂಡಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದು ರಾಣೇಬೆನ್ನೂರಿನ ಶಾಸಕ ಅರುಣಕುಮಾರ ಪೂಜಾರ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಹಾವೇರಿ, ರಾಣೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ ಎಸ್, ಉದ್ಯೋಗ ಕೋಶ ಹಾಗೂ ಐಕ್ಯೂಏಸಿ ಇವರುಗಳ ಆಯೋಜಿಸಿದ್ದ “ಉದ್ಯೋಗ ಮೇಳ”ದಲ್ಲಿ ಉದ್ಯೋಗಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ಗಳು ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ನಿರುದ್ಯೋಗಿ ಗಳಿಗೆ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದರು.
ಹಾವೇರಿ ಜಿಲ್ಲಾ ಉದ್ಯೋಗಾಧಿಕಾರಿ ಗಿರೀಶ ಕೆ.ಎನ್. ಮಾತನಾಡಿ, ಇಲಾಖೆಯಿಂದ ನಿರುದ್ಯೋಗಿಗಳಿಗಾಗಿ ಇರುವ ಸೌಲಭ್ಯ ಗಳನ್ನು ವಿವರಿಸಿದರು. ಯುವಜನರು ಕೇವಲ ಸರ್ಕಾರಿ ಕೆಲಸಗಳಿಗೆ ಮಾತ್ರವಲ್ಲಿ ಖಾಸಗಿ ವಲಯದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಪೂರ್ಣ ಸಿದ್ಧತೆಗಳನ್ನು ನಡೆಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಕ್ ಸಂಚಾಲಕ ಡಾ.ಎ.ವಿ.ಕುರ್ಲಿ, ವಿದ್ಯಾರ್ಥಿ ಗಳಿಗೋಸ್ಕರ ಪಠ್ಯ ಬೋಧನೆ ಜೊತೆಗೆ ಕೌಶಲ್ಯ ಹಾಗೂ ಸಂವಹನ ಅಭಿವೃದ್ಧಿ ತರಬೇತಿ ನೀಡುತ್ತಿದ್ದೇವೆ ಎಂದರು.
ಅದ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಲ್.ವಿ.ಸಂಗಳದ ಮಾತನಾಡಿ, ಇಂದು ಎಲ್ಲಾ ಖಾಸಗಿ ರಂಗಗಳಲ್ಲಿ ಕೇವಲ ಅಂಕಗಳಿಗೆ ಮಾತ್ರ ಮಹತ್ವ ನೀಡದೆ, ಜ್ಞಾನ ಹಾಗೂ ಕೌಶಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು ಎಂದರು.
ಶ್ರೀಹರಿ ಪ್ರಾಥಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಅರುಣಕುಮಾರ ಚಂದನ್ ಸ್ವಾಗತಿಸಿದರು. ಎಲ್.ಎಮ್.ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಉದ್ಯೋಗ ಕೋಶದ ಸಂಚಾಲಕ ಡಾ.ಎಸ್.ಕೆ. ಪಾಟೀಲ ವಂದಿಸಿದರು.
ಐಕ್ಯೂಏಸಿ ಸಂಚಾಲಕ ಎಸ್.ಬಿ.ಪಾಟೀಲ ಹಾಗೂ ವಿವಿಧ ಕಂಪನಿಗಳ ಹೆಚ್.ಆರ್. ವ್ಯವಸ್ಥಾಪಕರು ಗಳು ಉಪಸ್ಥಿತರಿದ್ದರು. ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಿಬ್ಬಂದಿ ಗಳು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
ಫೋರ್ಟಿಸ್, ಕೊಲಂಬಿಯಾ ಏಷಿಯಾ, ಅಪೋಲೋ ಹಾಸ್ಪಿಟಲ್ಸ್ ಸೇರಿದಂತೆ ಒಟ್ಟು 28 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ದ್ದವು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ 385 ಪುರುಷ ಹಾಗೂ 293 ಮಹಿಳಾ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ನೋಂದಾಯಿಸಿ ಕೊಂಡಿದ್ದರು. 193 ಪುರುಷ ಹಾಗೂ 102 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 295 ನಿರುದ್ಯೋಗಿಗಳಿಗೆ ಸ್ಥಳದಲ್ಲಿಯೇ ನೇಮಕ ಪತ್ರ ನೀಡಲಾಯಿತು. 105 ಪುರುಷ ಹಾಗೂ 57 ಮಹಿಳಾ ಸೇರಿ ಒಟ್ಟು 162 ಉದ್ಯೋಗಾಕಾಂಕ್ಷಿಗಳು ವಿವಿಧ ಕಂಪನಿಗಳಿಗೆ ಆಯ್ಕೆಗೊಂಡರು.