ವಿದ್ಯಾಥರ್ಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒತ್ತು ನೀಡಬೇಕು: ಡಿಡಿಪಿಯು ತಿಮ್ಮಪ್ಪ

ವಿದ್ಯಾಥರ್ಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒತ್ತು ನೀಡಬೇಕು: ಡಿಡಿಪಿಯು ತಿಮ್ಮಪ್ಪ

ಲೋಕದರ್ಶನ ವರದಿ

ಬಳ್ಳಾರಿ 30:ವಿದ್ಯಾಥರ್ಿಗಳು ಪರೀಕ್ಷಾ ಸಂದರ್ಭದಲ್ಲಿ ಹೆಚ್ಚಿನ ಗಮನವನ್ನು ಓದಿನ ಕಡೆ ಹರಿಸಬೇಕು. ಮೊಬೈಲ್ ಮತ್ತಿತರೆ ವಿದ್ಯುನ್ಮಾನ ವಸ್ತುಗಳನ್ನು ಮಿತವಾಗಿ ಬಳಸಬೇಕು.  ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿ ಹೆಚ್ಚಿನ ಅಂಕಗಳನ್ನು ಗಳಿಸಿ ಜೀವನವನ್ನು ಸದೃಢಗೊಳಿಸಿಕೊಳ್ಳಬೇಕೆಂದು ಬಳ್ಳಾರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕರಾದ ಕೆ.ತಿಮ್ಮಪ್ಪ ಅವರು ಕರೆ ನೀಡಿದರು. 

ನಗರದ ಮಾಜಿ ಪುರಸಭೆ ಸಕರ್ಾರಿ ಪದವಿ ಪೂರ್ವ ಕಾಲೇಜಿನವತಿಯಿಂದ ರಾಘವ ಕಲಾಮಂದರದಲ್ಲಿ  ಸೋಮವಾರದಂದು ಹಮ್ಮಿಕೊಂಡಿದ್ದ ಪ್ರತಿಭಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 

ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀನಿವಾಸಮೋತ್ಕರ್ ಅವರು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾಥರ್ಿಗಳು ಉಪನ್ಯಾಸಕರು ಬೋಧಿಸಿರುವ ಪಠ್ಯಕ್ರಮವನ್ನು ಅಚ್ಚುಕಟ್ಟಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಮತ್ತು ತಂದೆತಾಯಿಗಳಿಗೆ ಕೀತರ್ಿ ತರಬೇಕೆಂದು ಕರೆ ನೀಡಿದರು.  ಮತ್ತೋರ್ವ ಮುಖ್ಯ ಅತಿಥಿ ವೀರಶೇಖರರೆಡ್ಡಿ ಅವರು ಮಾತನಾಡಿ ಕಾಲೇಜಿನ ಅಭಿವೃದ್ಧಿಗೆ ಯಾವತ್ತೂ ಶ್ರಮಿಸಿ ವಿದ್ಯಾಥರ್ಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು. 

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೆ.ಗಿರಿಪ್ರಸಾದ್, ನೇಮಕಲ್ ರಾವ್, ರಾಜೇಂದ್ರ ಮುತ್ತಗಿ ಭಾಗವಹಿಸಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಗರದ ಗೋಪಾಲ್ ವಹಿಸಿದ್ದರು. ವಿದ್ಯಾಥರ್ಿಗಳ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿ  ಕಾಲೇಜು ಅಭಿವೃದ್ಧಿ ಸಮಿತಿ  ಸದಸ್ಯರಾದ ರಾಜೀವ್ ತೊಗರಿ ಅವರು ರೂ.15,000/-ಗಳನ್ನು ನಗದು ಬಹುಮಾನವನ್ನು ವಿತರಿಸಿದರು ಆರಂಭದಲ್ಲಿ ವಿದ್ಯಾಥರ್ಿಗಳು ನಾಡಗೀತೆಯನ್ನು ಗಾಯನ ಮಾಡಿದರು.  ಮಂಜುನಾಥರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಟಿ.ಕುಮಾರಸ್ವಾಮಿ ಸ್ವಾಗತಿಸಿದರು. ಕೆ.ಸುಂಕಪ್ಪ ಅವರು ವಾಷರ್ಿಕ ವರದಿಯನ್ನು ವಾಚಿಸಿದರು. ಕೆ.ವಿ.ನಾಗಿರೆಡ್ಡಿ ಅವರು ನಿರೂಪಿಸಿದರು. ಕೊನೆಯಲ್ಲಿ ವಿಜಯೇಂದ್ರ ವಂದಿಸಿದರು.


ಸುದ್ದಿ ಓದಿ