ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿ ಬೆಳವಣಿಗೆ ಹೊಂದಿ: ಶಾಸಕ ವಿಶ್ವಾಸ ವೈದ್ಯ
ಯರಗಟ್ಟಿ: ವಿದ್ಯಾರ್ಥಿಗಳ ಸರ್ವೇತೋಮುಖ ಬೆಳವಣಿಗೆಗೆ ಪಾಠಗಳಷ್ಟೇ ಕ್ರೀಡೆಗಳು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೋಡಗುವ ಮೂಲಕ ಸರ್ವತೋಮುಖವಾಗಿ ಬೆಳವಣಿಗೆ ಹೊಂದಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪಸದ ಮದ್ಲೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯರಗಟ್ಟಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಕ್ರೀಡಾ ಜ್ಯೋತಿ ಬರಮಾಡಿಕೊಂಡು ಮಾತನಾಡಿದ ಅವರು, ಶಾಲೆಯಲ್ಲಿ ಅನೇಕ ಸೌಲಭ್ಯಗಳ ಕೊರತೆ ಇದ್ದು ಅವಶಕವಿರುವ ಕುಡಿಯುವ ನೀರು, ಕೊಠಡಿ, ಗುಣಮಟ್ಟದ ರಸ್ತೆ, ಗಣಕಯಂತ್ರ ಸೇರಿ ಅನೇಕ ಮೂಲಸೌಲಭ್ಯಕ್ಕೆ ಸರಕಾರದ ಅನುದಾನ ತರಲು ಪ್ರಯತ್ನಿಸಲಾಗುವದು ಎಂದರು.
ಪಿಯು ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಮುನವಳ್ಳಿ, ಯರಗಟ್ಟಿ, ಸವದತ್ತಿ ದೂರದ ಪಟ್ಟನಗಳಿಗೆ ತೆರಳುತ್ತಿರುವದು ಪಾಲಕರಿಂದ ಗಮನಕ್ಕೆ ಬಂದಿದ್ದು. ಈ ಭಾಗದ ವಿದ್ಯಾರ್ಥಿನಿಯರು ಶಿಕ್ಷಣ ಮೊಟಕು ಗೊಳಸಿ ವಂಚಿತರಾಗುತ್ತಿದ್ದಾರೆ. ಮಕ್ಕಳ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಿಯು ಕಾಲೇಜು ನಿರ್ಮಾಣಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಪಕ್ಕೀರಪ್ಪ ಹದ್ದನ್ನವರ ಮಾತನಾಡಿ, ಮದ್ಲೂರ ಪ್ರೌಢ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು 4 ಕೊಠಡಿ, ಗಣಕಯಂತ್ರ, ಶುದ್ಧ ಕುಡಿಯುವ ನೀರು ಹಾಗೂ ವಿವಿಧ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ದೈಹಿಕ ಶಿಕ್ಷಕ ಎಲ್.ಎ.ಬಾನದಾರ ವಿದ್ಯಾಥರ್ಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಗ್ರಾಪಂ ಅಧ್ಯಕ್ಷ ಪುಂಡಲೀಕ ಉಪ್ಪಾರ, ಸಿಆರ್ಪಿ ಗುರುದೇವಿ ಮಲಕನ್ನವರ, ಎಸ್ಡಿಎಂಸಿ ಉಪಾಧ್ಯಕ್ಷ ಉದಯ ನರಿ, ಮಬನೂರ ಗ್ರಾಪಂ ಅದ್ಯಕ್ಷೆ ನಿಂಗವ್ವ ಮೇಟಿ, ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವನ್ನವರ, ಮುಖ್ಯಶಿಕ್ಷಕ ಎಚ್.ಎನ್.ಪಮ್ಮಾರ, ಪಡೆಪ್ಪ ನರಿ, ಲಕ್ಷ್ಮಣ ಹೊಟ್ಟಿನವರ, ಜಿ.ಎಚ್.ದೊಡಮನಿ, ಎಂ.ಬಿ.ಕಲಕುಟ್ರಿ, ಸಿದ್ದಾರೂಢ ಬಿಲಕಂಚಿ, ಅಶೋಕ ದೇಸನೂರ, ಯಲ್ಲಪ್ಪ ನರಿ, ರಾಮಚಂದ್ರ ಪಟಾತ, ಬಸವರಾಜ ಸುಣಗಾರ, ಸುರೇಶ ಹೊಟ್ಟಿನವರ, ವಿಠ್ಠಲ ಪಚ್ಚಿನವರ, ಬಾಬು ಪರಾಶಿ, ಸೋಮಪ್ಪ ಕಲ್ಲೋಳ್ಳಿ, ದ್ಯಾಮನ್ನ ಕುರಿ, ಕರೆಪ್ಪ ಹೊಟ್ಟಿನವರ, ಶಂಕರ ಇಟ್ನಾಳ, ಶಿಕ್ಷಕ ಬಸವಣ್ಣೆಪ್ಪ ಟಿ, ಜಿ.ಬಿ.ಬೆಟಗೇರಿ, ಐ.ಬಿ.ರೊಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು