ನವೋದಯ ಶಾಲೆಗೆ ವಿದ್ಯಾರ್ಥಿ ಗುರುಪ್ರಸಾದ ಆಯ್ಕೆ
ತಾಳಿಕೋಟೆ 15: ಸಮೀಪದ ಮಿಣಜಗಿ ಕ್ರಾಸ್ನಲ್ಲಿರುವ ಘನಮಠೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆ ಶಾಲೆಯ ವಿದ್ಯಾರ್ಥಿ ಗುರುಪ್ರಸಾದ ರಾಜಶೇಖರ ತೋಟದ ಆಲಮಟ್ಟಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ.
ಘನಮಠೇಶ್ವರ ಪಬ್ಲಿಕ್ ಶಾಲೆಯಲ್ಲಿ ಗುರುಪ್ರಸಾದ 8 ನೇ ತರಗತಿ ಅಭ್ಯಾಸ ಮಾಡಿದ್ದು ಪ್ರಸ್ತುತ 9ನೇ ತರಗತಿಗೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಮ್.ಸಜ್ಜನ, ಮುಖ್ಯಗುರುಗಳಾದ ಬಸವರಾಜ ಸಜ್ಜನ, ಬಿ.ಎಮ್.ಪಟೇಲ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಯ ಸಾಧನೆಗೆ ಎಲ್ಲಾ ಶಿಕ್ಷಕವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.