ರಾಣೆಬೆನ್ನೂರ

ರೈಲ್ವೆ ಮೇಲ್ ಸೇತುವೆ ಹೋರಾಟ ಸಮಿತಿ ಮಾಧ್ಯಮ ಗೋಷ್ಠಿ

ರೈಲ್ವೆ ಮೇಲ್ ಸೇತುವೆ ಹೋರಾಟ ಸಮಿತಿ ಮಾಧ್ಯಮ ಗೋಷ್ಠಿ

ರಾಣೇಬೆನ್ನೂರು 29: ನಗರದ ಪ್ರವಾಸಿ ಮಂದಿರದಲ್ಲಿ ದೇವರಗುಡ್ಡ ರಸ್ತೆ ರೈಲ್ವೆ ಮೇಲ್ ಸೇತುವೆ ಹೋರಾಟ ಸಮಿತಿಯ ಮುಖಂಡರು ಮಾಧ್ಯಮ ಗೋಷ್ಟಿ ನಡೆಸಿ, ಸಮಿತಿಯಿಂದ ಜ. 30ರಂದು  ಮೇಲ್ ಸೇತುವೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ರೈಲು ರೋಕೊ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. 

ಮಾಧ್ಯಮಗೋಷ್ಠಿಯಲ್ಲಿ  ಮಾತನಾಡಿದ, ರವೀಂದ್ರ ಗೌಡ ಪಾಟೀಲ್ ಅವರು  ರೈಲ್ವೇ ಮೆಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯಿಂದ ಕಳೆದ 5 ವರ್ಷಗಳಿಂದ ಹಲವಾರು ಹೋರಾಟಗಳು, ಪ್ರತಿಭಟನೆ, ಧರಣಿ ನಡೆಸಲಾಗಿದೆ, ಹೋರಾಟದ ಫಲವಾಗಿ ಕಾಮಗಾರಿ ನಿರ್ಮಾಣಕ್ಕೆ ಹಸಿರು ನಿಶಾನ್ ಸಿಕ್ಕಿದೆ, ಆದರೆ ರೈಲ್ವೆ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಇದರ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು, ಸವಾರರು, ಪಾದಚಾರಿಗಳು, ಕೃಷಿಕರು ಅನೇಕರಿಗೆ ಸಮಸ್ಯೆ ಎದು ರಿಸುತ್ತಿದ್ದಾರೆ. 

 ಕೂಡಲೇ ಕಾಮಗಾರಿ ಆರಂಭಿಸಬೇಕು ಮತ್ತು ಇದಕ್ಕಾಗಿ ಭೂಮಿ ನೀಡಿದ ರೈತರಿಗೆ ಅಗತ್ಯ ಪರಿಹಾರ ವಿತರಿಸಲು ಮುಂದಾಗಬೇಕು ಎಂದು ಇಲಾಖೆಗೆ ಅಗ್ರಹಿಸಿದರು.  ರಾಣೇಬೆನ್ನೂರು ನಗರದ ಬಾಗಲಕೋಟಿ-ಬಿಳಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿಗೆ ರೈಲ್ವೇ ಮೇಲ್ಸತುವೆ ನಿರ್ಮಾಣಕ್ಕೆ ಅವಶ್ಯವಿರುವ 2ಎಕರೆ 30ಗುಂಟೆ ಜಮೀನನ್ನ ಭೂ ಸ್ವಾಧಿನ ಪಡಿಸಿಕೊಂಡಿರುವ ರೈತರಿಗೆ ಸಿಗಬೇಕಾದ  1,35,62,500. ರೊ ಪರಿಹಾರವನ್ನ ಶೀಘ್ರ ಬಿಡುಗಡೆಗೊಳಿಸಿ ಮೆಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿಯಿಸಿದರು. ಇದಕ್ಕೆ ಸರಿಯಾದ ಪ್ರತಿಕ್ರಿಯ ಬರಬೇಕು ಕಾಮಗಾರಿ ಆರಂಭಿಸಲು ಮುಂದಾಗಬೇಕು ಇಲ್ಲದೆ ಹೋದರೆ ಜನವರಿ 30ರಂದು  ರಾಣೇಬೆನ್ನೂರು ಬಂದ್ ಮತ್ತು ರೈಲ ರೋಖೋ ಹೋರಾಟದ ಚಳುವಳಿ ಮಾಡಲು ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಪಾಟೀಲ್ ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಜಗದೀಶ್ ಕೆರೋಡಿ, ಉಮೇಶ್ ಗುರುಲಿಂಗಪ್ಪ ಗೌಡ್ರ್, ಇಕ್ಬಾಲ್ ಸಾಬ್ ರಾಣಿಬೆನ್ನೂರು, ಹರಿಹರ ಗೌಡ ಪಾಟೀಲ್, ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ