ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಲ್ಲಿ ನಿರ್ದಾಕ್ಷಿಣ್ಯ ಕ್ರಮ
ಯರಗಟ್ಟಿ: ಪೊಸ್ಕೊ ಅಡಿ ಕೇಸ್ ದಾಖಲಾದರೆ 20 ವರ್ಷಗಳ ಕಠಿಣ ಶಿಕ್ಷೆಯಾಗುವುದು. ಆದ್ದರಿಂದ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿ ಇಂತಹ ಪ್ರಕರಣಗಳು ಬರುಕಳಿಸದಂತೆ ಸಾರ್ವಜನಿಕರು ಎಚ್ಚತ್ತುಕೊಳ್ಳಬೇಕು ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಇಲಾಖೆಯಿಂದ ರವಿವಾರ ದಿ.19 ರಂದು ಸಾಯಂಕಾಲ ಹಮ್ಮಿಕೊಂಡಿದ್ದ ಕುಮಾನ ಮಡ್ಡಿ ನಿವಾಸಿಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ನಡೆದ ಎರಡು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರ ಮೇಲೆ ಕೇಸ್ ದಾಖಲಾಗಿದೆ. ತಮ್ಮ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸಿ ಮತ್ತು ಆಸೆ ಆಮಿಸೆಗಳಿಗೆ ಇನ್ನೊಬ್ಬರೊಂದಿಗೆ ಹೊಗದಂತೆ ಮಕ್ಕಳಿಗೆ ಜಾಗೃತಿ ಹೇಳಬೇಕು ಎಂದರು.
ಕುಮಾನ ಮಡ್ಡಿ ಪ್ರದೇಶದಲ್ಲಿ ಪೊಲಿಗಳ ಕಾಟ ಹೆಚ್ಚಾಗಿದೆ ಮತ್ತು ಸಿಕ್ಕಸಿಕ್ಕಲ್ಲಿ ಕುಳಿತು ದಾಂದಲೆ ಹಾಕುತ್ತಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಂಪೂರ್ಣ ನಿಯಂತ್ರಿಸಬೇಕು. ಮತ್ತು ಮಹಿಳೆಯರಿಗೆ ಬಹಿರರ್ದೆಸೆಗೆ ಹೋಗುವುದು ಸಹ ಅಸಹ್ಯ ಅನಿಸುತ್ತಿದೆ. ಅಲ್ಲದೇ ಈ ಭಾಗದಲ್ಲಿ ಇಸ್ಪಿಟ ಹಾವಳಿ ಹೆಚ್ಚಾಗಿದೆ ಇದನ್ನೆಲ್ಲ ನಿಯಂತ್ರಿಸಿ ನಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಇಲ್ಲಿನ ಮಹಿಳೆಯರು ಪೊಲೀಸ ಅಧಿಕಾರಿಗಳಿಗೆ ಮನವಿ ಮಾಡಿದರು.
ನಾವು ಸದಾ ನಿಮ್ಮ ರಕ್ಷಣೆ ಇರುತ್ತೆವೆ. ನಿವು ನಮಗೆ ಸಹಕಾರ ನೀಡಿ ಕಿಡಿಗೆಡಿಗಳ ಮಾಹಿತಿ ನಮಗೆ ನೀಡಬೇಕು. ಈ ಭಾಗದಲ್ಲಿ ಹಚ್ಚಿನ ಗಸ್ತು ಹಾಕುತ್ತೆವೆ. ನಿಮ್ಮಗೆ ಯಾವುದೇ ಸಮಸ್ಸೆ ಬಂದಾಗ ತಕ್ಷಣಕ್ಕೆ 112 ಗೆ ಕರೆ ಮಾಡಬೇಕು ಎಂದು ಸಿಪಿಐ ಮಾಲಿಪಾಟೀಲ ತಿಳಿಸಿದರು. ರಮೇಶ ಗಿಡ್ಡವ್ವಗೋಳ, ರಾಜು ದಿಲಾವನಾಯ್ಕ, ಜಗದೀಶ ನಾವಿ, ಸುನೀಲ ಬುದಿಗೊಪ್ಪ, ರೇಣುಕಾ ದಾಸರ, ಪಾರವ್ವ ಗೌಡರ, ಬಿಯಮ್ಮ ಗೋಕಾಕ ಇತರರು ಇದ್ದರು.