ಶಿಗ್ಗಾವ್

ಪೊಲೀಸ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಸ್ಟ್ರೀಮ್ ಉಪಕರಣ ವಿತರಣೆ

ಪೊಲೀಸ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಸ್ಟ್ರೀಮ್ ಉಪಕರಣ ವಿತರಣೆ

ಶಿಗ್ಗಾವಿ 04: ಪಟ್ಟಣದ ಕಾಂಗ್ರೆಸ್ ಮುಖಂಡ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕ ಶ್ರೀಕಾಂತ ದುಂಡಿಗೌಡ್ರ ಹುಟ್ಟು ಹಬ್ಬದ ನಿಮಿತ್ಯ ಪೋಲಿಸ ಠಾಣೆಯ ಎಲ್ಲಾ ಪೋಲಿಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಬಳಗದ ವತಿಯಿಂದ ಸ್ಟ್ರೀಮ್ ಉಪಕರಣ ವಿತರಣೆ ಮಾಡಲಾಯಿತು. 

ಸ್ಟ್ರೀಮ ಉಪಕರಣ ವಿತರಣೆ ಮಾಡಿ ಮಾತನಾಡಿದ ಕಾಂಗ್ರೇಸ ಯುವ ಮುಖಂಡ ನವೀನ ಸಾಸನೂರ ಮಾತನಾಡಿ ಕೊರೋನಾ ವಾರಿಯರ್ಸಗೆ ನಿಮ್ಮ ಬೆಂಬಲಕ್ಕೆ ನಾವು ಸದಾ ಸಿದ್ದರಿದ್ದೇವೆ ಏಕೆಂದರೆ ಜೀವದ ಹಂಗನ್ನು ತೋರಿದು ಎರಡನೆ ಅಲೆಯನ್ನು ಸಹಿತ ಯಶಸ್ವಿಗೋಳಿಸಿದ್ದೀರಿ ಮೂರನೆ ಅಲೆಯ ಮುಂಜಾಗ್ರತೆಗಾಗಿ ತಾಲೂಕಿನ ಎಲ್ಲ ಕೊರೋನಾ ವಾರಿಯರ್ಸಗೆ ಹಂತ ಹಂತವಾಗಿ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಬಳಗದ ವತಿಯಿಂದ ಸ್ಟ್ರೀಮ ಉಪಕರಣೆ ವಿತರಣೆ ಮಾಡುತ್ತಿದ್ದೇವೆ ಎಂದರು. 

ಕಾಂಗ್ರೇಸ ಯುವ ಮುಖಂಡ ವಿಶ್ವನಾಥ ಗಾಣಗೇರ ಮಾತನಾಡಿ ಶ್ರೀಕಾಂತ ದುಂಡಿಗೌಡ್ರ ಅಣ್ಣಾವರಿಗೆ ದೇವರು ಆಯುಷ್ಯ, ಆರೋಗ್ಯ, ಸಂಪತ್ತು ಕೊಟ್ಟು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸ ಮಾಡಲು ಶಕ್ತಿಯನ್ನು ನೀಡಲಿ ಹಾಗೂ ಸ್ಟ್ರೀಮ್ ಉಪಕರಣ ವಿತರಣೆ ಉದ್ದೇಶ ವಾರಿಯರ್ಸಗಳು ತಮ್ಮ ಕೆಲಸದಲ್ಲಿ ಮಗ್ನರಾಗಿ ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿವಹಿಸಬಾರದು ಎಂದು ಅವರ ಆರೋಗ್ಯದ ಬಗ್ಗೆಯೂ ಸಹಿತ ಕಾಳಜಿವಹಿಸಲಿ ಎಂದರು. 

ಈ ಸಂದರ್ಭದಲ್ಲಿ ಪೋಲಿಸ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರ್‌.ಜಿ.ಪಾಟೀಲ, ಸುಮಿತ ಸೂರ್ಯವಂಶಿ, ಶಂಭು ನೆರ್ತಿ, ಸರತಾಜ ಹಾನಗಲ್ಲ, ವಿಜಯ ತಡಸ, ಸಾಧಿಕ ಸವಣೂರ, ಥಮೀದ ಖಾಜೀ, ರಬ್ಬಾನಿ ತರೀನ, ಆಕಾಶಗೌಡ ಪಾಟೀಲ ಸೇರಿದಂತೆ ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ