ಹೂವಿನ ಹಡಗಲಿ

ರಾಜ್ಯಮಟ್ಟದ ನೃತ್ಯಕಲಾ ಸ್ಪರ್ಧೆ

ರಾಜ್ಯಮಟ್ಟದ ನೃತ್ಯಕಲಾ ಸ್ಪರ್ಧೆ

ಹೂವಿನಹಡಗಲಿ 22 : ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪ್ರತಿಷ್ಠಿತ ಸಾಂಸೃತಿಕ ಸೈಕ್ಷಣಿಕ, ಮತ್ತು ಸಾಮಾಜಿಕಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಇದೇ ದಿ.21 ರಂದು ರಾಜ್ಯ ಮಟ್ಟದ ನೃತ್ಯಕಲಾ ಸ್ಪರ್ಧೆ ಮಾಲಿಕೆ -11 ಶೀರ್ಷಿಕೆ ಅಡಿಯಲ್ಲಿ ನಾಡಿನ ಸಂಪ್ರದಾಯಬದ್ದ ವೈವಿಧ್ಯಮಯ ನೃತ್ಯ  ವಿಷಯದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು. ಈ ಒಂದು ಅವಿಸ್ಮರಣೀಯ ವಿಶಿಷ್ಟ ನೈಪುಣ್ಯತೆಯನ್ನು ಹೊಂದಿರುವ ಕಲಾವಿದರನ್ನು ಗುರುತಿಸುವ ನೃತ್ಯ ಕಲಾ ಸ್ಪರ್ಧೆಯಲ್ಲಿ ಸಮಸ್ತ ರಾಜ್ಯಾದ್ಯೇಂತ ಅಷ್ಟೇ ಅಲ್ಲದೇ ಅಂತರಾಜ್ಯ ಕಲಾವಿದರು ಭಾಗವಹಿಸಿದ್ದರು.ಇಂದು ಜರುಗಿದ ನೃತ್ಯ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ದಾವಣಗೆರೆಯ ಸಿಂಚನಾ. ಎಸ್, ಚನ್ನಗಿರಿಯ ಕುಮಾರಿ ತ್ರಿವೇಣಿ ಚಿಕಡೋಣಿ.  ದ್ವಿತೀಯ ಸ್ಥಾನದಲ್ಲಿ ಜಯಪುರದ ಅಂಜನಾ. ವಿ. ಮ್ಮುಖಡೆ, ಬೆಂಗಳೂರಿನ ತಲಘಟ್ಟಪುರದ ಹಸ್ಮಿತ ಆರ್, ತೃತೀಯ ಸ್ಥಾನದಲ್ಲಿ ಬೆಂಗಳೂರಿನ ತಲಘಟ್ಟಪುರದ  ತನಿಷಾ. ಆರ್  ದಾವಣಗೆರೆಯ ಲಕ್ಷ್ಮೀ ಕೆ ವಿ  ವಿಶಿಷ್ಟ ಸ್ಥಾನದಲ್ಲಿ ಬೆಳಗಾವಿಯ ಖುಷಿ ನಾರಾಯಣ ಅನ್ವೇಕರ್, ಕ್ರಮವಾಗಿ ವಿಜೇತರಾಗಿರುವರು. 

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ. ಇದರ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಯವರು ಪ್ರತಿವಾರವು ಗಾಯನ ಸ್ಪರ್ಧೆ, ಕಾವ್ಯ ಸ್ಪರ್ದೆ ನೃತ್ಯ ಸ್ಪರ್ಧೆ ನಮ್ಮ ಸಂಘದ ವತಿಯಿಂದ ನಡೆಯುತ್ತದೆ. ಎಂದು ತಿಳಿಸುತ್ತಾ  ವಿಶಿಷ್ಟ ನೃತ್ಯ ಕಲೆಯನ್ನು ಪ್ರದರ್ಶಿಸುವ ಮೂಲಕ ವಿಜೇತರಾಗಿ ಪ್ರಶಸ್ತಿ ಪ್ರಧಾನ ಪ್ರಮಾಣ ಪತ್ರ ಪಡೆದ ಸಮಸ್ತ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.  ಶ್ರೀಮತಿ ವಿದ್ಯಾ ಕೆ ಮೂಡಿಗೇರಿ ಯವರು ಇಂದಿನ ನೃತ್ಯ ಕಲಾ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.

ಸುದ್ದಿ ಓದಿ