ಕಂಪ್ಲಿ

ಸಮಾಜ ಸೇವಕ ಸಿ. ರಾಜಪ್ಪಗೆ ರಾಜ್ಯ ಮಟ್ಟದ ಪ್ರಶಸ್ತಿ

ಸಮಾಜ ಸೇವಕ ಸಿ. ರಾಜಪ್ಪಗೆ ರಾಜ್ಯ ಮಟ್ಟದ ಪ್ರಶಸ್ತಿ

ಕಂಪ್ಲಿ 25: ಭಾರತ್ ಸ್ಕೌಟ್ ಅಂಡ್‌ಗೈಡ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಂತೋಷ್ ಹೆಗ್ಡೆ ಮಾಜಿ ನ್ಯಾಯಮೂರ್ತಿ ಮಾಜಿ ಲೋಕಾಯುಕ್ತರ ಅಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ ಬೆಂಗಳೂರು ಇವರು ಆಯೋಜಿಸಿದ್ದ ವಿವಿಧ ರಂಗಗಳಲ್ಲಿ  ಸೇವೆ ಸಲ್ಲಿದವರನ್ನು ಗುರುತಿಸಿ ರಾಜ್ಯ ಮಟ್ಟದ  ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಿದ್ದ್ದು, ಕಂಪ್ಲಿ ತಾಲೂಕಿನ ಬೆಳಗೋಡ ಗ್ರಾಮದ ರಾಮಪ್ಪ ಸಿ (ಕಾರ್ಮಿಕ ಇಲಾಖೆ) ಇವರು ಆರ್ಥಿಕವಾಗಿ ಬಡ ಮಕ್ಕಳ ಶಿಕ್ಷಣಕ್ಕೆ, ನಿರ್ಗತಿಕ ಕುಟುಂಬಗಳಿಗೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಗ್ರಾಮೀಣ ಯುವಕರಿಗೆ ಕ್ರೀಡೆಯಲ್ಲಿ ವೃದ್ದಾ ಅನಾಥ ಆಶ್ರಮಗಳಿಗೆ ಹಲವಾರು ಸೇವೆ ಮತ್ತು ಸಹಾಯ ಮಾಡಿ ಸಮಾಜದಲ್ಲಿ ಮಾದರಿಯಾಗಿರುತ್ತಾರೆ.

ಇವರ ಸೇವೆಯನ್ನು ಗುರುತಿಸಿ ಅಖಿಲ ಕರ್ನಾಟಕ ರಾಜ್ಯಕಿಸಾನ್‌ಜಾಗೃತಿ ಸಂಘವು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು  ಈ ಕಾರ್ಯಕ್ರದಲ್ಲಿ  ಮಾಜಿ ನ್ಯಾಯಮೂರ್ತಿ ಲೋಕಾಯುಕ್ತ ಸಂತೋಷ್ ಹೆಗ್ಡೆ,  ರಾಜ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಖಿಲ ಕರ್ನಾಟಕರಾಜ್ಯಕಿಸಾನ್‌ಜಾಗೃತಿ ಸಂಘದ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ