‘ರಾಜ್ಯ ಸರಕಾರ ಕೊರೊನಾ ಕಾರ್ಯ ಸಮರ್ಥವಾಗಿ ನಿಭಾಯಿಸಿದೆ’
ಶಿಗ್ಗಾವಿ 09: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ಹಾಗೂ ಯಡಿಯೂರ್ಪನವರ ನೇತೃತ್ವದಲ್ಲಿ ರಾಜ್ಯ ಸರಕಾರ ಕೊರೊನಾ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಶಿಗ್ಗಾವಿ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕಾ ಬಿಜೆಪಿ ಮಂಡಲದ ವಿಡಿಯೋ ಸೆಮಿನಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕರೋನಾ ಮಹಾಮಾರಿ ಸೋಂಕನ್ನು ತಡೆಗಟ್ಟುವ ಮೋದಿಜಿಯವರ ನೇತೃತ್ವದ ಆಡಳಿತ ಹಾಗೂ ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರ್ಪನವರ ಸರಕಾರಗಳು ಸೋಂಕಿತರಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿ ಸಮರ್ಥವಾಗಿ ಸೇವೆ ನಿರ್ವಹಿಸಿದ್ದಾರೆ ಎಂದರು.
ಜನರಿಗೆ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತಿರುವ ಸಂದರ್ಭ ಕಂಡು ಉಚಿತವಾಗಿ ರೇಷನ್ ಕೊಡುವಲ್ಲಿ ಜನಧನ್ ಖಾತೆ ಮುಖಾಂತರ ಐದುನೂರು ರೂಪಾಯಿಯಂತೆ ಮೂರು ಬಾರಿ ಧನಸಹಾಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಆರೋಗ್ಯ ಕಾಪಾಡುವಲ್ಲಿ ಸೋಂಕು ತಡೆಗಟ್ಟುವಲ್ಲಿ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರ ಆರೋಗ್ಯ ರಕ್ಷಣೆಗಾಗಿ ಆಕ್ಸಿಜನ್ ಹಾಗೂ ಆಕ್ಸಿಜನ್ ಪ್ಲಾಂಟ್. ವೆಂಟಿಲೇಟರ್ ಪಿಪಿ ಕಿಟ್ ಕಾನ್ಸಂಟ್ರೇಟ್ ಗಳ ಮುಖಾಂತರ ಆರೋಗ್ಯ ರಕ್ಷಣೆ ನೀಡಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಕೊಡುವಲ್ಲಿ ಹಾಗೂ ಪಾಲಕ-ಫೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ವಿಮೆ ಜಾರಿ ಮಾಡಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಲ್ಲಿ ಮುಂದಾಗಿ ಸೇವೆ ಮಾಡಿದ್ದಾರೆ, ಜೊತೆಗೆ ನಮ್ಮ ಕ್ಷೇತ್ರದ ಶಾಸಕರು, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ತಮ್ಮ ಮನೆಯ ಆವರಣವನ್ನೇ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾಡಿ ವೈದ್ಯರ ತಂಡವನ್ನೇ ನಿಯೋಜಿಸಿ ಆರೋಗ್ಯ ರಕ್ಷಣೆ, ಪ್ರತಿಯೊಂದು ಆರೋಗ್ಯ ಕೇಂದ್ರ ಹಾಗೂ ಪಿ ಎಚ್.ಸಿಗಳಲ್ಲಿ ಮತ್ತು ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಪೌಷ್ಟಿಕಾಂಶ ಹೆಚ್ಚಿಸುವಲ್ಲಿ ಪೌಷ್ಟಿಕ ಆಹಾರ ಧಾನ್ಯದ ಕಿಟ್ ಹಾಗೂ ಆಹಾರದ ಓಷಧಿ ಕಿಟ್ ನೀಡುವ ಮುಖಾಂತರ ವಾತ್ಸಲ್ಯ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮವಾಗಿ ಹಾವೇರಿ ಜಿಲ್ಲೆಯಲ್ಲಿ ಚಾಲನೆ ನೀಡಿ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ ಎಂದರು. ಒಟ್ಟಾರೆ ಮೂರನೇ ಅಲೆ ಬಂದರು ತಡೆಗಟ್ಟುವಲಿ ಮುಂಜಾಗೃತ ತಯಾರಿಯಾಗಿ ಯೋಜನೆಗಳನ್ನು ರೂಪಿಸಿ ಸೋಂಕು ಬಾರದಂತೆ ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ನಾವೆಲ್ಲರೂ ಕೈಜೋಡಿಸಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಮತ್ತು ಸ್ವಚ್ಛತೆ ಕಾಪಾಡಿಕೊಂಡು ಸೋಂಕು ಸಂಪೂರ್ಣವಾಗಿ ನಾಶ ಮಾಡುವಲ್ಲಿ ಯಶಸ್ವಿಯಾಗಿ ಸುಂದರ ಆರೋಗ್ಯವಂತ ಸಮಾಜ ಹಾಗೂ ರಾಷ್ಟ್ರ ಕಟ್ಟೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಶಶಿಧರ್ ಹೊಸಳ್ಳಿ, ಮಂಡಲದ ಪ್ರತಿನಿಧಿಗಳು ಜಿಲ್ಲೆಯ ಪದಾದಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.